ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಕಚೇರಿಯ ವಾಸ್ತು ಹೀಗಿರಲಿ

ಶನಿವಾರ, 29 ಸೆಪ್ಟಂಬರ್ 2018 (11:38 IST)
ಬೆಂಗಳೂರು : ವ್ಯಾಪಾರದಲ್ಲಿ ಲಾಭ ಗಳಿಸಬೇಕಾದಲ್ಲಿ ವ್ಯಾಪಾರ ನಡೆಸುವ ಕಚೇರಿಯ ವಾಸ್ತು ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಸರಿಯಿಲ್ಲವಾದಲ್ಲಿ ಎಷ್ಟು ಪ್ರಯತ್ನಪಟ್ಟರೂ ಲಾಭ ಕೈಗೆ ಸಿಗುವುದಿಲ್ಲ. ಧನ ವೃದ್ಧಿಯಾಗಬೇಕಾದಲ್ಲಿ ಕಚೇರಿಯ ಪ್ರತಿಯೊಂದು ಗೋಡೆ, ಬಾಗಿಲು ಸೇರಿದಂತೆ ಕಚೇರಿಯ ಎಲ್ಲ ವಸ್ತುಗಳನ್ನು ವಾಸ್ತು ಪ್ರಕಾರ ಇಡುವುದು ಬಹಳ ಮಹತ್ವ.


ವಾಸ್ತು ಶಾಸ್ತ್ರದ ಪ್ರಕಾರ ಕಚೇರಿಯ ಗೋಡೆಯ ಬಣ್ಣ ತಿಳಿಯಾಗಿರಲಿ.

ಕಚೇರಿಯ ಬಾಗಿಲು ಒಳಗಡೆಯಿಂದ ತೆರೆಯುವಂತಿರಲಿ. ಹೊರಗಡೆಯಿಂದ ತೆಗೆಯುವಂತಿದ್ದರೆ ಲಾಭ ಕಡಿಮೆಯಾಗುತ್ತದೆ. ಜೊತೆಗೆ ಸಾಲ ಕೂಡ ಹೆಚ್ಚಾಗುತ್ತದೆ.

ಅಂಗಡಿ ಅಥವಾ ಕಚೇರಿಯ ಉತ್ತರ ಅಥವಾ ಪಶ್ಚಿಮಕ್ಕೆ ಶೋಕೇಸ್ ಇರಲಿ. ಇದರಿಂದ ಗ್ರಾಹಕರ  ಸಂಖ್ಯೆ ಹೆಚ್ಚಾಗುತ್ತದೆ.
ಧನವೃದ್ಧಿಗಾಗಿ ತಿಜೋರಿಯ ಮುಖವನ್ನು ಉತ್ತರ ದಿಕ್ಕಿನಲ್ಲಿಡಿ.

ವ್ಯಾಪಾರದಲ್ಲಿ ವೃದ್ಧಿಯಾಗ್ತಿಲ್ಲ. ಮಾರುಕಟ್ಟೆಯಲ್ಲಿ ನಿಮ್ಮ ಗೌರವಕ್ಕೆ ಧಕ್ಕೆಯಾಗ್ತಿದೆ ಎಂದಾದಲ್ಲಿ ಮೆಟ್ಟಿಲಿನ ದೋಷವಿದೆ ಎಂದರ್ಥ. ಸಮ ಪ್ರಮಾಣದ ಮೆಟ್ಟಿಲಿರದಂತೆ ನೋಡಿಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿಮ್ಮ ಮನೆ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆಯೇ ಎಂದು ತಿಳಿದುಕೊಳ‍್ಳುವುದು ಹೇಗೆ ಗೊತ್ತಾ?