Select Your Language

Notifications

webdunia
webdunia
webdunia
webdunia

ಮಥುರಾ ಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ ಪ್ರಕರಣದ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

kRISHNA Janmabhumi

sampriya

ಪ್ರಯಾಗ್‌ರಾಜ್ , ಶುಕ್ರವಾರ, 31 ಮೇ 2024 (19:01 IST)
Photo By X
ಪ್ರಯಾಗ್‌ರಾಜ್: ರಾಮ ಜನ್ಮಭೂಮಿ ಅಯೋಧ್ಯೆ ಅಭಿವೃದ್ಧಿಯಾದ ಬೆನ್ನಲ್ಲೇ ಕೃಷ್ಣ ಜನ್ಮಭೂಮಿ ಮಥುರಾ ಅಭಿವೃದ್ಧಿ ಕುರಿತು ಚರ್ಚೆ ನಡೆಯುತ್ತಿದೆ. ಮಥುರಾದಲ್ಲಿರುವ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಸ್ಥಳ ನಿರ್ವಹಣಾ ವಿವಾದ ಕುರಿತು ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು.  ಶುಕ್ರವಾರ ನ್ಯಾಯಮೂರ್ತಿಗಳು ಕಾಯ್ದಿರಿಸಿದರು.

ಕೃಷ್ಣಮಂದಿರಕ್ಕೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿ ತೆರವು ಕೋರಿ ಹಲವು ಅರ್ಜಿಗಳನ್ನು ಸಲ್ಲಿಕೆಯಾಗಿದ್ದವು. ಮೊಘಲ್ ದೊರೆ ಔರಂಗಜೇಬ್‌ನ ಅವಧಿಯಲ್ಲಿ ದೇವಾಲಯ ನೆಲಸಮಗೊಳಿಸಿ, ಅದೇ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿತ್ತು ಎಂದು ಹಿಂದೂ ಪರ ಅರ್ಜಿಯಲ್ಲಿ ದೂರಲಾಗಿತ್ತು.

ಆದರೆ,  ಮುಸ್ಲಿಂ ಪರ ವಕೀಲರು, ಪೂಜಾ ಸ್ಥಳ ಕುರಿತು 1991ರ ವಿಶೇಷ ಅವಕಾಶ ಕಾಯ್ದೆ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಗಳು ಅನರ್ಹ. ಈ ಕಾಯ್ದೆಯಡಿ ಯಾವುದೇ ಪೂಜಾ ಸ್ಥಳದ ಪರಿವರ್ತನೆಯನ್ನು ನಿಷೇಧಿಸಿದೆ. ಜತೆಗೆ 1947ರ ಆ. 15ಕ್ಕೆ ಸಂಬಂಧಿಸಿದಂತೆ ಅಸ್ಥಿತ್ವದಲ್ಲಿರುವ ಅಂಥ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಕಾಪಾಡಬೇಕು ಎಂದು ಪೀಠದ ಮುಂದೆ ವಾದ ಮಂಡಿಸಿದರು.

ಪ್ರಕರಣದ ವಾದ ಮತ್ತು ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರು ತೀರ್ಪನ್ನು ಕಾಯ್ದರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ ಪ್ರಾಣಿ ಬಳಿ: ಡಿಕೆಶಿ ಆರೋಪವನ್ನು ತಳ್ಳಿಹಾಕಿದ ಕೇರಳದ ಸಚಿವೆ ಬಿಂದು