ಬೆಂಗಳೂರು : ಕಾಂಗ್ರೆಸ್ ಶಾಸಕರ ಜೊತೆ ಮೂವರು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಅತೃಪ್ತ ಜೆಡಿಎಸ್ ಶಾಸಕರ ಬಂಡಾಯ ಶಮನಕ್ಕೆ ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲ್ಯಾನ್ ವೊಂದನ್ನು ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಜೆಡಿಎಸ್ ನ ಕೆಲ ನಾಯಕರು ಬಿಜೆಪಿ ಸಂರ್ಕದಲ್ಲಿರುವ ಹಿನ್ನಲೆ ಹಾಗೂ ಜೆಡಿಎಸ್ ನಲ್ಲಿರುವ ಭಿನ್ನಾಭಿಪ್ರಾಯ ಶಮನ ಮಾಡಲು ಸಿಎಂ ನಿರ್ಧಾರ ಮಾಡಿದ್ದು, ಅದಕ್ಕಾಗಿ ಜೆಡಿಎಸ್ ನ ಎಲ್ಲಾ ಸಚಿವರುಗಳಿಂದ ರಾಜೀನಾಮೆ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹೊಸ ತಂತ್ರದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರೊಂದಿಗೆ ನಿನ್ನೆ ನಡೆದ ಜೆಡಿಎಲ್ ಪಿ ಸಭೆಯಲ್ಲಿ ಚರ್ಚೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಮುಂಬೈನಲ್ಲಿರುವ ಅತೃಪ್ತ ಜೆಡಿಎಸ್ ಶಾಸಕರ ಮನವೊಲಿಸಿ ಕರೆತರಲು ಇಂದು ಮೂವರು ಸಚಿವರಾದ ಹೆಚ್.ಡಿ.ರೇವಣ್ಣ, ಶಾ.ರಾ.ಮಹೇಶ್ ಹಾಗೂ ಸಿ.ಎಸ್.ಪುಟ್ಟರಾಜು ಅವರನ್ನು ಮುಂಬೈಗೆ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.