Publish Date: Thu, 20 Jun 2019 (14:47 IST)
Updated Date: Thu, 20 Jun 2019 (14:48 IST)
ಕಾಂಗ್ರೆಸ್ ನಿಂದ ಕೈ ಬಿಟ್ಟಿರುವ ಶಾಸಕ ರೋಷನ್ ಬೇಗ್ ವಿರುದ್ಧ ಪ್ರತಿಭಟನೆಗಳು ಮುಂದುವರಿದಿವೆ.
ರೋಷನ್ ಬೇಗ್ ಮನೆ ಮುಂದೆ ಪ್ರತಿಭಟನೆ ನಡೆದಿದ್ದು, ಬೇಗ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ವಿಕೆಓ ಶಾಲೆಯ ಪೋಷಕರಿಂದ ರೋಷನ್ ಬೇಗ್ ನಿವಾಸದ ಮುಂದೆ ಪ್ರತಿಭಟನೆ ನಡೆದಿದೆ. ಐಎಂಎ ವತಿಯಿಂದ ವಿಕೆಓ ಶಾಲೆಗೆ ಧನಸಹಾಯ ಮಾಡಲಾಗಿತ್ತು.
ಐಎಂಎ ಧನ ಸಹಾಯದಿಂದ ವಿಕೆಓ ಶಾಲೆಗೆ ಹೆಚ್ಚುವರಿಯಾಗಿ ಶಿಕ್ಷಕರ ನೇಮಕ ಮಾಡಲಾಗಿತ್ತು. ಐಎಂಎ ಪ್ರಕರಣದಿಂದ ಶಾಲೆಗೆ ನೇಮಕ ಮಾಡಿದ್ದ ಶಿಕ್ಷಕರು ವಾಪಸ್ ಆಗುತ್ತಿದ್ದಾರೆ. ಹೆಚ್ಚುವರಿ ಶಿಕ್ಷಕರನ್ನು ಶಾಲೆಯಿಂದ ತೆಗೆದು ಹಾಕಿದೆ ವಿಕೆಓ ಶಾಲೆ. ಈ ಹಿನ್ನೆಲೆಯಲ್ಲಿ ಐಎಂಎ ನೇಮಕ ಮಾಡಿದ್ದ ಶಿಕ್ಷಕರನ್ನು ವಾಪಸ್ ಕರೆಸಿ ಅಂತ ಆಗ್ರಹ ಮಾಡುತ್ತಿದ್ದಾರೆ.
ಪೋಷಕರು, ವಿದ್ಯಾರ್ಥಿಗಳಿಂದ ಶಿಕ್ಷಕರ ವಾಪಸಾತಿಗೆ ಆಗ್ರಹ ಕೇಳಿಬರುತ್ತಿದೆ. ರೋಷನ್ ಬೇಗ್ ನಿವಾಸದ ಮುಂದೆ ಪೋಷಕರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ರೋಷನ್ ಬೇಗ್ ನೆರವಿನಿಂದಲೇ ಶಾಲೆಗೆ ಐಎಂಎ ಶಿಕ್ಷಕರ ನೇಮಕ ಮಾಡಲಾಗಿತ್ತು.