Daily Horoscope

Select Your Language

Notifications

webdunia
webdunia
webdunia
webdunia

ಮಂಗಳೂರಿನ MRPL ಕಂಪನಿಯಲ್ಲಿ ಭಾರಿ ಸ್ಫೋಟ: ಗಗನಕ್ಕೆ ಚಿಮ್ಮಿದ ದಟ್ಟ ಹೊಗೆ, ತಲ್ಲಣಗೊಂಡ ಸುರತ್ಕಲ್ Video

MRPL blast
ಮಂಗಳೂರಿನ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಮೂರನೇ ಹಂತದ (Phase 3) ಘಟಕದಲ್ಲಿ ಇಂದು (ಸೆಪ್ಟೆಂಬರ್ 30, 2026) ಮಧ್ಯಾಹ್ನ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಹಲವು ಕಿಲೋಮೀಟರ್ ಪ್ರದೇಶದ ಮನೆಗಳು ಹಾಗೂ ಕಟ್ಟಡಗಳು ಕಂಪಿಸಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
 
ಕಂಪಿಸಿದ ಮನೆಗಳು:
ಮಧ್ಯಾಹ್ನ ಸುಮಾರು 12:25ರ ವೇಳೆಗೆ ಈ ಬೃಹತ್ ಸ್ಫೋಟದ ಶಬ್ದ ಕೇಳಿಬಂದಿದೆ. ಎಂಆರ್‌ಪಿಎಲ್ ಘಟಕದ ಬಾಯ್ಲರ್‌ನಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಸ್ಫೋಟದ ಶಬ್ದವು ಜೋಕಟ್ಟೆ, ಬೈಕಂಪಾಡಿ, ಜೋಕಟ್ಟೆ ಗ್ರಾಮ ಪಂಚಾಯತ್, ಕಾಳಾವಾರು, ಸುರತ್ಕಲ್ ಮತ್ತು ಮಂಗಳೂರು ವಿಮಾನ ನಿಲ್ದಾಣದವರೆಗೂ ಭಾರಿ ಪ್ರಮಾಣದಲ್ಲಿ ಪ್ರತಿಧ್ವನಿಸಿದೆ.
 
ಕಟ್ಟಡಗಳಿಗೆ ಹಾನಿ: ಜೋಕಟ್ಟೆ ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಸುತ್ತಮುತ್ತಲ ಮನೆಗಳ ಕಿಟಕಿ ಗ್ಲಾಸ್‌‌ಗಳು ಪುಡಿಪುಡಿಯಾಗಿದ್ದು, ಬಾಗಿಲುಗಳು ಕಂಪಿಸಿವೆ.
 
ಆಕಾಶದತ್ತ ದಟ್ಟ ಹೊಗೆ: ಸ್ಫೋಟದ ಬೆನ್ನಲ್ಲೇ ಕಪ್ಪು ಬಣ್ಣದ ಬೃಹತ್ ಪ್ರಮಾಣದ ಹೊಗೆ ಮತ್ತು ಬೆಂಕಿಯ ಜ್ವಾಲೆ ಆಕಾಶಕ್ಕೆ ಎದ್ದು ಕಂಡಿದ್ದು, ಹಲವು ಕಿಲೋಮೀಟರ್ ದೂರದಿಂದಲೂ ಈ ದೃಶ್ಯ ಸ್ಪಷ್ಟವಾಗಿ ಗೋಚರಿಸಿದೆ.
 
ಘಟನೆ ತಿಳಿಯುತ್ತಿದ್ದಂತೆಯೇ ಎಂಆರ್‌ಪಿಎಲ್‌ನ ಸ್ವಂತ ಅಗ್ನಿಶಾಮಕ ದಳ, ಮಂಗಳೂರು ಬಂದರು ಪ್ರಾಧಿಕಾರ, ಕಾದ್ರಿ ಹಾಗೂ ಪಾಂಡೇಶ್ವರ ಭಾಗದ ಅಗ್ನಿಶಾಮಕ ವಾಹನಗಳು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಎಂಆರ್‌ಪಿಎಲ್ ಡಿಪಿಎಸ್ ಶಾಲೆಗೆ ತಕ್ಷಣವೇ ರಜೆ ಘೋಷಿಸಿ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ.ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಪತ್ತು ನಿರ್ವಹಣಾ ತಂಡಗಳು ಭೇಟಿ ನೀಡಿದ್ದು, ಘಟನೆಗೆ ನಿಖರ ಕಾರಣವೇನು ಹಾಗೂ ಪ್ರಾಣಾಪಾಯ ಅಥವಾ ಸಾರ್ವಜನಿಕ ಆಸ್ತಿಗೆ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ