Daily Horoscope

Select Your Language

Notifications

webdunia
webdunia
webdunia
webdunia

ಏನೋ ನಿನ್ನ ಹೆಂಡ್ತಿಗೆ ಮೆಸೇಜ್ ಮಾಡಿದ್ರೆ ಸುಮ್ನಿರ್ತೀದ್ಯಾ.. ಎಂದಿದ್ದ ದರ್ಶನ್ ಅಬ್ಬರದ ಇಂಚಿಂಚೂ ಬಯಲು

Approver Pradosh
ಬೆಂಗಳೂರು: ಏನೋ ನಿನ್ನ ಹೆಂಡ್ತಿಗೆ ಮೆಸೇಜ್ ಹಾಕಿದ್ರೆ ನೀನು ಸಮ್ನಿರ್ತಿದ್ಯಾ ಎಂದು ನಟ ದರ್ಶನ್ ಸಹಚರ ನಾಗರಾಜ್ ಗೆ ಆವಾಜ್ ಹಾಕಿ ರೇಣುಕಾಚಾರ್ಯ ಮೇಲೆ ಹಲ್ಲೆ ನಡೆಸಿದ್ದರು ಎಂಬ ಅಂಶವನ್ನು ಪ್ರದೋಷ್ ಬಯಲು ಮಾಡಿದ್ದಾರೆ.
 
ಮಾಫಿ ಸಾಕ್ಷಿಯಾಗಿರುವ ಆರೋಪಿ ಪ್ರದೋಷ್ ಇಂದೂ ಕೂಡಾ ಕೋರ್ಟ್ ಮುಂದೆ ಘಟನೆ ಬಗ್ಗೆ ಇಂಚಿಂಚೂ ಮಾಹಿತಿ ನೀಡಿದ್ದಾರೆ. ರೇಣುಕಾಚಾರ್ಯ ಕೊಲೆ ಪ್ರಕರಣದಲ್ಲಿ ಏನೆಲ್ಲಾ ಆಗಿದೆ ಎಂಬುದನ್ನು ತಮಗೆ ಗೊತ್ತಿರುವ ಎಲ್ಲಾ ವಿಚಾರಗಳನ್ನೂ ಪ್ರದೋಷ್ ಕೋರ್ಟ್ ಮುಂದೆ ಹೇಳಿದ್ದಾರೆ.
 
‘ರೇಣುಕಾಸ್ವಾಮಿ ಮೇಲೆ ದರ್ಶನ್ ಮನಬಂದಂತೆ ಹಲ್ಲೆ ನಡೆಸಿದ್ದರು. ಪ್ಯಾಂಟ್ ಬಿಚ್ಚಲು ಹೇಳಿ ಮರ್ಮಾಂಗಕ್ಕೆ ಒದ್ದಿದ್ದರು. ನೆಲಕ್ಕೆ ಉಗುಳಿ ಎಂಜಲು ನೆಕ್ಕಲು ಹೇಳಿದ್ದರು’ ಎಂಬಿತ್ಯಾದಿ ಮಾಹಿತಿಯನ್ನು ಪ್ರದೋಷ್ ನಿನ್ನೆ ಕೋರ್ಟ್ ಮುಂದೆ ಹೇಳಿದ್ದರು.
 
ಇದರ ಜೊತೆಗೆ ಈಗ ಹಲ್ಲೆ ವೇಳೆ ದರ್ಶನ್ ಹೇಗೆಲ್ಲಾ ನಡೆದುಕೊಂಡಿದ್ದರು ಎಂದು ಎಳೆ ಎಳೆಯಾಗಿ ಹೇಳಿದ್ದಾರೆ. ರೇಣುಕಾಸ್ವಾಮಿ ಮೇಲೆ ಮನಬಂದಂತೆ ಹಲ್ಲೆ ನಡೆಸುವಾಗ ತೊಂದರೆಯಾಗಬಹುದು ಎಂದು ಸಹಚರ ನಾಗರಾಜ್ ತಡೆಯಲು ಬಂದಿದ್ದಾನೆ. ಈ ವೇಳೆ ನಿನ್ನೆ ಹೆಂಡ್ತಿಗೆ ಮೆಸೇಜ್ ಮಾಡಿದ್ರೆ ಸುಮ್ನಿರ್ತಿದ್ಯಾ ಎಂದು ನಾಗರಾಜ್ ಮೇಲೆಯೇ ಅಬ್ಬರಿಸಿದ್ದರು. ಬಳಿಕ ರೇಣುಕಾ ಮುಖಕ್ಕೆ ಪಂಚ್ ಮಾಡಿದ್ದರು ಎಂದು ಪ್ರದೋಷ್ ಹೇಳಿದ್ದಾರೆ. ಇಂದು ಪ್ರದೋಷ್ ಮತ್ತಷ್ಟು ಸ್ಪೋಟಕ ವಿಚಾರಗಳನ್ನು ಹೊರಹಾಕುವ ಸಾಧ‍್ಯತೆಯಿದೆ. ಇದು ದರ್ಶನ್ ಗೆ ಮತ್ತಷ್ಟು ಉರುಳಾಗಲಿದೆ.
 
 

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯರಾತ್ರಿ ನಿರ್ಜನ ರಸ್ತೆಯಲ್ಲಿ ನಡೆದ ಭೀಕರ ಘಟನೆ: ಕಾರು ತೆರೆದು ನಿಂತಿದ್ದ ಯುವಕನ ಕತೆ ಏನಾಯ್ತು ನೋಡಿ Video