Publish Date: Tue, 04 Feb 2020 (13:47 IST)
Updated Date: Tue, 04 Feb 2020 (13:49 IST)
ನಿನ್ನೇ ಮದುವೆ ಆಗ್ತೀನಿ ಅಂತ ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡು ಆ ಬಳಿಕ ಭೂಪನೊಬ್ಬ ಕೈ ಕೊಟ್ಟಿದ್ದಾನೆ.
ಹಾವೇರಿಯ ಲಿಂಗಾಪುರ ಹಳ್ಳಿಯ ಮಂಜಪ್ಪ ಚೌಡಣ್ಣನವರ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದಾನೆ.
ಈತನ ವಿರುದ್ಧ ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿ ದೂರು ನೀಡಿದ್ದಳು.
ಅಪರಾಧ ಸಾಬೀತಾದ ಕಾರಣಕ್ಕೆ ಮಂಜಪ್ಪಗೆ 25 ಸಾವಿರ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.