Publish Date: Sun, 09 Apr 2017 (09:29 IST)
Updated Date: Sun, 09 Apr 2017 (12:05 IST)
ಬೆಂಗಳೂರು: ಮೀಸೆ ಹೊತ್ತ ಈ ಗಂಡಿಗೆ ಎಂಥಾ ಡಿಮ್ಯಾಂಡ್ ನೋಡಿ! ಮದುವೆ ಮುರಿದು ಬೀಳಲು ಹಲವು ಕಾರಣಗಳಿರಬಹುದು. ಆದರೆ ಈ ವರ ಮಹಾಶಯ ಊಟ ಕಡಿಮೆಯಾಯ್ತು ಎಂದು ಮದುವೆಯೇ ಮುರಿದುಕೊಂಡ!
ಬೆಂಗಳೂರಿನ ಕೋಣನಕುಂಟೆಯಲ್ಲಿ ಈ ಘಟನೆ ನಡೆದಿದೆ. ರಿಸೆಪ್ಷನ್ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವರನ ಕಡೆಯವರಿಗೆ 30 ಜನ ಜನರಿಗೆ ಊಟ ಕಡಿಮೆಯಾಯ್ತು ಎಂದು ವರನ ಕಡೆಯವರು ತಗಾದೆ ತೆಗೆದಿದ್ದರು ಎಂದು ಆರೋಪಿಸಲಾಗಿದೆ.
ಇದೇ ಕಾರಣಕ್ಕೆ ವರ ಮಹಾಶಯ ನಾಗೇಂದ್ರ ಪ್ರಸಾದ್ ಮದುವೆ ಬೇಡವೆಂದು ಛತ್ರ ಬಿಟ್ಟು ಹೊರ ನಡೆದ ಎಂದು ವಧುವಿನ ಕಡೆಯವರು ಆರೋಪಿಸಿದ್ದಾರೆ. ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಆದರೆ ನಂತರ ಪರಸ್ಪರ ಕೆಸರೆರಚಾಟ ಮಾಡಿಕೊಂಡ ಉಭಯ ಕಡೆಯವರು, ಮದುವೆ ಮುರಿಯಲು ಅವರೇ ಕಾರಣ ಎಂದು ಮಾಧ್ಯಮಗಳ ಮುಂದೆ ಗುದ್ದಾಡಿಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ