Select Your Language

Notifications

webdunia
webdunia
webdunia
webdunia

ಉಪಚುನಾವಣೆ ನಡೆಯುತ್ತಿರುವ ಮತಯಂತ್ರಗಳಲ್ಲೊಂದು ಸ್ಪೆಷಾಲಿಟಿ ಇದೆ.. ಏನ್ ಗೊತ್ತಾ..?

ಉಪಚುನಾವಣೆ ನಡೆಯುತ್ತಿರುವ ಮತಯಂತ್ರಗಳಲ್ಲೊಂದು ಸ್ಪೆಷಾಲಿಟಿ ಇದೆ.. ಏನ್ ಗೊತ್ತಾ..?
ಮೈಸೂರು , ಭಾನುವಾರ, 9 ಏಪ್ರಿಲ್ 2017 (08:58 IST)
ಪಂಚರಾಜ್ಯ ಚುನಾವಣೆ ಬಳಿಕ ಇವಿಎಂ ಮೆಶಿನ್ ಅಕ್ರಮದ ಬಗ್ಗೆ ಆರೋಪಗಳು ಕೇಳಿಬಂದವು. ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ದೆಹಲಿ ಸಿಎಂ ಕೇಜ್ರಿವಾಲ್ ಸಹ ಚಕಾರ ಎತ್ತಿದ್ದರು. ಸಹಜವಾಗಿಯೇ ಇದರ ಎಫೆಕ್ಟ್ ಕರ್ನಾಟಕದ ಉಪಚುನಾವಣೆ ಮೇಲೂ ಆಗಿದೆ.

ಇವಿಎಂ ಮೇಲಿನ ಅನುಮಾನ ನಿವಾರಣೆಗೆ ಮತ್ತು ಮತದಾರ ತಾನು ಹಾಕಿದ ಮತ ಯಾರಿಗೆ ಹೋಗಿದೆ ಎಂಬುದನ್ನ ಖಚಿತಪಡಿಸಿಕೊಳ್ಳಲು ವಿವಿ ಪ್ಯಾಟ್(ವೋಟರ್ ವೆರಿಫೈಡ್ ಪೇಪರ್ ಆಡಿಟ್) ಯಂತ್ರ ಅಳವಡಿಸಲಾಗಿದೆ. ಮತದಾರ ವೊಟ್ ಹಾಕಿದ ಕೂಡಲೇ ವಿವಿಪ್ಯಾಟ್ ಯಂತ್ರದ ಪುಟ್ಟ ಪರದೆಯಲ್ಲಿ ನೀವು ವೊಟ್ ಹಾಕಿರುವ ಅಭ್ಯರ್ಥಿಯ ಹೆಸರು, ಚಿಹ್ನೆ, ಕ್ರಮಸಂಖ್ಯೆ ಸಹಿತ ರಸೀದಿ ಕಾಣುತ್ತದೆ. ಬಳಿಕ ರಸೀದಿ ಮುದ್ರಿತವಾಗಿ ಮತಯಂತ್ರ ಸೇರುತ್ತದೆ.

ಇದರಿಂದಾಗಿ ಮತದಾರನಿಗೆ ತಾನು ವೋಟ್ ಹಾಕಿದವರಿಗೆ ಮತ ತಲುಪಿದೆಯೋ?  ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಬುಕ್ ನಲ್ಲಿ ಶ್ರೀರಾಮಚಂದ್ರನ ವಿರುದ್ದ ಅವಹೇಳನಾರಿ ಪೋಸ್ಟ್