ಬೆಂಗಳೂರು - ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಇವತ್ತು ಐತಿಹಾಸಿಕ ದಿನ.ಆಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆ ನಡೆಯುತ್ತಿದೆ.ಜನರ ಭಾವನೆಗಳಿಗೆ ಸ್ಪಂದಿಸಬೇಕು.ಕಾನೂನಾತ್ಮಕವಾಗಿ ಪ್ರಧಾನಿಯವರು ಮಾಡಿದ್ದಾರೆ.ಶ್ರದ್ಧಾ ಭಾವದಿಂದ ಮೋದಿ ಪ್ರಾಣಪ್ರತಿಷ್ಠೆ ಮಾಡ್ತಿದ್ದಾರೆ.ಕೋಟಿಕೋಟಿ ಭಾರತೀಯರಿಗೆ ಕೃತಜ್ಙತೆ ಸಲ್ಲಿಸುವ ದಿನ.ಕೆಲವರು ಇವತ್ತು ನಮ್ಮಜೊತೆ ಇಲ್ಲ.
ರಾಮಜನ್ಮಭೂಮಿ ಹೋರಾಟದಲ್ಲಿ ಹಲವರ ಪಾತ್ರವಿದೆ.ರಾಮನಿಗೆ ಕರ್ನಾಟಕಕ್ಕೆ ನಂಟಿದೆ.ಅಯೋಧ್ಯೆ ರಾಮನ ಜನ್ಮಸ್ಥಳ.ಅಂಜನಾದ್ರಿ ಆಂಜನೇಯನ ಜನ್ಮಸ್ಥಳ.ಆಂಜನೇಯ ಇದ್ರೆ ರಾಮ ಪರಿಪೂರ್ಣನಾಗ್ತಾನೆ ಹೀಗಂತ ವಾಲ್ಮೀಕಿ ರಾಮಾಯಣದಲ್ಲಿದೆ.ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಗಮನ ಕೊಟ್ಟಿದ್ದೆವು.ಈಗಿನ ಸರ್ಕಾರವು ಒತ್ತು ಕೊಡಬೇಕು.೨೫ ವರ್ಷದಲ್ಲಿ ರಾಮರಾಜ್ಯ ಸ್ಥಾಪಿತವಾಗಲಿದೆ.ರಾಜಕಾರಣ ಬೆರೆಸುವುದು ಸರಿಯಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.