Select Your Language

Notifications

webdunia
webdunia
webdunia
webdunia

ಮಣಿಪಾಲ್ ಆಸ್ಪತ್ರೆ ಮೇಲೆ ಐ. ಟಿ. ದಾಳಿ

ಮಣಿಪಾಲ್ ಆಸ್ಪತ್ರೆ ಮೇಲೆ ಐ. ಟಿ. ದಾಳಿ
ಬೆಂಗಳೂರು , ಬುಧವಾರ, 7 ಸೆಪ್ಟಂಬರ್ 2022 (15:43 IST)
ರಾಜ್ಯದ ಪ್ರತಿಷ್ಠಿತ ಮಣಿಪಾಲ್ ಸಂಸ್ಥೆ ಸೇರಿದಂತೆ ದೇಶಾದ್ಯಂತ 53ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ದಾಳಿಸಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದೆ. ಇದರಲ್ಲಿ ದೆಹಲಿ, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಮುಂಬೈ, ಛತ್ತೀಸ್‍ಘಡ, ಉತ್ತರಖಂಡ್, ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಇಂದು ಮುಂಜಾನೆಯಿಂದಲೇ ದಾಳಿ ಆರಂಭವಾಗಿದೆ
ಬೆಂಗಳೂರಿನಲ್ಲಿ ವಾಹನಗಳನ್ನು ಬಳಸಿಕೊಂಡು ಆಗಮಿಸಿದ ಅಧಿಕಾರಿಗಳು, ಮಣಿಪಾಲ್ ಗ್ರೂಪ್‍ನ ಹಣಕಾಸು ವಿಭಾಗದಲ್ಲಿ ಶೋಧ ನಡೆಸಿದ್ದಾರೆ. ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಖ್ ಗೆಲ್ಹೋಟ್ ಅವರ ಅಪ್ತರಾದ ಸಚಿವ ರಾಜೇಂದ್ರ ಯಾದವ್ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಇಲ್ಲಿ 300ಕ್ಕೂ ಹೆಚ್ಚು ಪೊಲೀಸರನ್ನು ಬಳಸಿಕೊಳ್ಳಲಾಗಿದೆ.
 
ಒಟ್ಟು ಕಾರ್ಯಾಚರಣೆಗೆ ಸಿಆರ್‍ಪಿಎಫ್‍ನ ಭದ್ರತೆ ಆಯೋಜನೆ ಮಾಡಲಾಗಿತ್ತು. ಹಲವಾರು ವ್ಯಾಪಾರೋದ್ಯಮ ಸಂಸ್ಥೆಗಳ ಮೇಲೆ ಮುಗಿಬಿದ್ದಿರುವ ಐಟಿ ಅಧಿಕಾರಿಗಳು, ತೆರಿಗೆ ವಂಚನೆಯ ಸುಳಿವಿನ ಬೆನ್ನತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ?