Select Your Language

Notifications

webdunia
webdunia
webdunia
webdunia

12 ದಿನದ ಮಗು ಹಾಗೂ ಬಾಣಂತಿ ರಕ್ಷಣೆ..!

12 ದಿನದ ಮಗು ಹಾಗೂ ಬಾಣಂತಿ ರಕ್ಷಣೆ..!
ಬೆಂಗಳೂರು , ಮಂಗಳವಾರ, 6 ಸೆಪ್ಟಂಬರ್ 2022 (14:07 IST)
12 ದಿನದ ಹಸುಗೂಸು- ಬಾಣಂತಿಯನ್ನ ರಕ್ಷಣೆ ಮಾಡಲಾಗಿದೆ. ಗೋಕಾಕ್ ತಾಲೂಕಿನ ಮಾನಿಕವಾಡಿ ಗ್ರಾಮದಲ್ಲಿ ನಿನ್ನೆ ಸಂಜೆ ರಕ್ಷಣಾಕಾರ್ಯ ನಡೆದಿದೆ.
 
ಸತತ ಅರ್ಧ ಗಂಟೆಯಿಂದ ಮಳೆ ಸುರಿದು ನೀರು ಮನೆಗಳಿಗೆ ನುಗ್ಗಿತ್ತು.
 
ಮನೆಗಳಿಗೆ ನೀರು ನುಗ್ಗಿದ್ದರಿಂದ ಹಸುಗೂಸು ಹಾಗೂ ಬಾಣಂತಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ವಿಚಾರ ಸ್ಥಳೀಯರಿಗೆ ಗೊತ್ತಾಗುತ್ತಿದ್ದಂತೆಯೇ ಅವರ ರಕ್ಷಣೆ ಬಂದಿದ್ದಾರೆ.
 
ಮನೆಯ ಇತರೆ ಸದಸ್ಯರನ್ನ ಮನೆಯ ಮೇಲ್ಛಾವಣಿಯ ಹೆಂಚನ್ನ ತೆಗೆದು ರಕ್ಷಣೆ ಮಾಡಲಾಯಿತು. ಆದರೆ ಬಾಣಂತಿ ಹಾಗೂ ಶಿಶುವನ್ನ ಸ್ಥಳೀಯರು ಕಷ್ಟಪಟ್ಟು ಮನೆಯೊಳಗೆ ಹೋಗಿ ರಕ್ಷಣೆ ಮಾಡಿದ್ದಾರೆ..
ಸದ್ಯ ಈ ಸುದ್ದಿ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕದ ಕಂಪನಿಯನ್ನು ಖರೀದಿಸಲಿದೆ ರಿಲಯನ್ಸ್‌