Select Your Language

Notifications

webdunia
webdunia
webdunia
webdunia

Mangaluru Suhas Shetty Murder: ಸುಹಾಸ್ ಶೆಟ್ಟಿ ಮರ್ಡರ್ ಮಾಡಿದ ಆರೋಪಿಗಳು ಎಸ್ಕೇಪ್ ಆಗುವುದನ್ನು ನೋಡುತ್ತಾ ನಿಂತ ಪಬ್ಲಿಕ್: ವಿಡಿಯೋ

Mangaluru Suhas Shetty murder

Krishnaveni K

ಮಂಗಳೂರು , ಶುಕ್ರವಾರ, 2 ಮೇ 2025 (11:30 IST)
Photo Credit: X
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮರ್ಡರ್ ಮಾಡಿದ ಆರೋಪಿಗಳು ಎಸ್ಕೇಪ್ ಆಗುವುದನ್ನು ಸಾರ್ವಜನಿಕರು ನೋಡುತ್ತಾ ನಿಂತ ವಿಡಿಯೋ ಈಗ ವೈರಲ್ ಆಗಿದೆ.

ಬಜ್ಪೆಯಲ್ಲಿ ಜನನಿಬಿಡ ರಸ್ತೆಯಲ್ಲೇ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳ ಗುಂಪು ಹೊಡೆದು ಬರ್ಬರವಾಗಿ ಕೊಲೆ ಮಾಡಿತ್ತು. ವಿಪರ್ಯಾಸವೆಂದರೆ ಅಕ್ಕಪಕ್ಕ ಜನ ಓಡಾಡುತ್ತಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ.

ಇನ್ನೂ ಒಂದು ಬೇಸರದ ಸಂಗತಿಯೆಂದರೆ ದುಷ್ಕರ್ಮಿಗಳು ಕೃತ್ಯ ನಡೆಸಿದ ಬಳಿಕ ಆರಾಮವಾಗಿ ಯಾವುದೇ ಭಯವಿಲ್ಲದೇ ಕಾರು ಏರಿ ಸಾರ್ವಜನಿಕರ ಮುಂದೆಯೇ ಕಾರು ಏರಿ ಹೊರಟಿದ್ದಾರೆ. ಅವರು ತಪ್ಪಿಸಿಕೊಳ್ಳುವುದನ್ನು ಜನ ನೋಡುತ್ತಾ ನಿಂತಿದ್ದರು.

ಹಂತಕರು ನಾಲ್ಕರಿಂದ ಐದು ಮಂದಿಯಿದ್ದರು. ಆದರೆ ಅಲ್ಲಿ ಸಾರ್ವಜನಿಕರು ಸುಮಾರು 25 ಜನ ಸೇರಿದ್ದರು. ಮನಸ್ಸು ಮಾಡಿದ್ದರೆ ದುಷ್ಕರ್ಮಿಗಳನ್ನು ತಡೆಯಬಹುದಿತ್ತು. ಆದರೆ ಯಾರೂ ತಡೆಯದೇ ಇದ್ದಿದ್ದು ವಿಪರ್ಯಾಸ.



Share this Story:

Follow Webdunia kannada

ಮುಂದಿನ ಸುದ್ದಿ

Viral video: ಪಾಕಿಸ್ತಾನ ಬಾವುಟ ರಸ್ತೆಯಿಂದ ತೆಗೆಯಲು ಯತ್ನಿಸಿದ ಮುಸ್ಲಿಂ ವಿದ್ಯಾರ್ಥಿನಿ: ಶಾಲೆಯಿಂದಲೇ ಔಟ್