Select Your Language

Notifications

webdunia
webdunia
webdunia
webdunia

ಮಂಗಳೂರು ಸ್ಟೈಲ್ ಸಿಗಡಿ ಫ್ರೈ

ಮಂಗಳೂರು ಸ್ಟೈಲ್ ಸಿಗಡಿ ಫ್ರೈ
ಬೆಂಗಳೂರು , ಸೋಮವಾರ, 10 ಫೆಬ್ರವರಿ 2020 (11:19 IST)
ಬೆಂಗಳೂರು : ಸಾಮಾನ್ಯವಾಗಿ ಸಮುದ್ರದ ಆಹಾರಗಳು ತುಂಬಾ ರುಚಿಯಾಗಿರುತ್ತದೆ. ಅದರಲ್ಲೂ ಸಿಗಡಿಯಿಂದ ತಯಾರಿಸಿದ ಎಲ್ಲಾ ಆಹಾರಗಳು ತುಂಬಾ ರುಚಿಕರವಾಗಿರುತ್ತದೆ. ಆದ್ದರಿಂದ ಮಂಗಳೂರು ಸ್ಟೈಲ್ ಸಿಗಡಿ ಫ್ರೈ ಒಮ್ಮೆ ಮಾಡಿ ನೋಡಿ.


ಬೇಕಾಗುವ ಸಾಮಾಗ್ರಿಗಳು:
ಸಿಗಡಿ, ನಿಂಬೆ ರಸ 1 ಚಮಚ, ಉಪ್ಪು, ಬಿಳಿ ಕಾಳು ಮೆಣಸು 1 ಚಮಚ, ಮೊಸರು 2 ಕಪ್, ಹುರಿದ ಕೆಂಪು ಮೆಣಸು 20, ದನಿಯಾ 1 ಚಮಚ, ಮೆಂತ್ಯ ಬೀಜ 1 ಚಮಚ, ಜೀರಿಗೆ 1 ಚಮಚ, ಬೆಳ್ಳುಳ್ಳಿ ಎಸಳು 10, ಹುಳಿ ನೀರು 1 ಕಪ್, ತುಪ್ಪ 3 ಚಮಚ, ಎಣ್ಣೆ 2 ಚಮಚ.


ಮಾಡುವ ವಿಧಾನ :
ಚೆನ್ನಾಗಿ ತೊಳೆದು ಸಿಪ್ಪೆ ತೆಗೆದ ಸಿಗಡಿಗೆ ಉಪ್ಪು, ಬಿಳಿ ಕಾಣುಮೆಣಸು, ಅರಶಿನ, ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿಯಿಡಿ ಫ್ರಿಜ್ ನಲ್ಲಿಡಿ. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಈ ಸಿಗಡಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.


ಹಾಗೇ ಮಿಕ್ಸಿಯಲ್ಲಿ  ಹುರಿದ ಕೆಂಪು ಮೆಣಸು, ದನಿಯಾ, ಮೆಂತ್ಯ ಬೀಜ, ಜೀರಿಗೆ, ಬೆಳ್ಳುಳ್ಳಿ ಮತ್ತು ಹುಳಿಯನ್ನು ಹಾಕಿ ಚೆನ್ನಾಗಿ ರುಬ್ಬಿ. ಬಳಿಕ ಬಾಣಲೆಯಲ್ಲಿ ಎಣ್ಣೆ ಹಾಕಿ ರುಬ್ಬಿದ ಮಸಾಲೆಯನ್ನು ಹಾಕಿ 3-5 ನಿಮಿಷಗಳ ಕಾಲ ಬೇಯಿಸಿ. ನಂತರ ಸಿಗಡಿ ಮತ್ತು ತುಪ್ಪವನ್ನು ಹಾಕಿ. ಅಗತ್ಯವಿದ್ದರೆ ಉಪ್ಪನ್ನು ಸೇರಿಸಿಕೊಳ್ಳಬಹುದು. ಇವಿಷ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷಗಳ ಕಾಲ  ಕಡಿಮೆ ಉರಿಯಲ್ಲಿ ಬೇಯಿಸಿ. ಈಗ ಸಿಗಡಿ ಫ್ರೈ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಗನವಾಡಿಗೆ ತಡವಾಗಿ ಬಂದ ಪುಟ್ಟ ಮಗುವಿಗೆ ಸಹಾಯಕಿ ಮಾಡಿದ್ದೇನು ಗೊತ್ತಾ?