Publish Date: Mon, 10 Feb 2020 (10:28 IST)
Updated Date: Mon, 10 Feb 2020 (10:36 IST)
ಬೆಂಗಳೂರು : ಬೈಎಲೆಕ್ಷನ್ ನಲ್ಲಿ ಸೋತರೂ ಅಧಿಕಾರ ಗಿಟ್ಟಿಸಿಕೊಳ್ಳಲು ಸೋತ ಮಾಜಿ ಶಾಸಕರು ಲೆಕ್ಕಚಾರ ಹಾಕಿದ್ದು, ಆ ಮೂಲಕ ಸಿಎಂ ಗೆ ಒತ್ತಡ ಹೇರಲು ಹೊಸ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟದಲ್ಲಿ ಸ್ಥಾನ ಕೊಡದಿದ್ದರೂ ತೊಂದರೆ ಇಲ್ಲ. ಬಿಡಿಎ ಅಧ್ಯಕ್ಷ ಸ್ಥಾನ ಪಡೆಯಲು ಎಂಟಿಬಿ ನಾಗರಾಜ್ ಸ್ಕೆಚ್ ಹಾಕಿದ್ದು, ಆ ಮೂಲಕ ಅಧಿಕಾರ ಪಡೆಯಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕಾನೂನು ತೊಡಕಿನ ಬಗ್ಗೆ ಎಂಟಿಬಿ ನಾಗರಾಜ್ ರಾಜ್ಯದ ನಿವೃತ್ತ ನ್ಯಾಯಾಮೂರ್ತಿಗಳಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದು, ಅಧಿಕಾರ ಪಡೆಯಬಹುದೆಂದು ನಿವೃತ್ತ ಜಡ್ಜ್ ಎಂಟಿಬಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸುಮಾರು 20 ಪುಟಗಳ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.