Webdunia - Bharat's app for daily news and videos

Install App

ದಯಾಮರಣಕ್ಕೆ ಅನುಮತಿ ನೀಡಿ ಎಂದು ಮಂಗಳಮುಖಿಯರ ಬೇಡಿಕೆ..!

Webdunia
ಗುರುವಾರ, 18 ಆಗಸ್ಟ್ 2022 (14:58 IST)
ಸಮಾಜದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಮಡಿಕೇರಿ ನಿವಾಸಿ ರಿಹಾನ ಈ ಅನುಮತಿ ಕೋರಿದ್ದಾರೆ. ಈ ಬಗ್ಗೆ ಮಾತಾನಾಡಿರುವ ಅವರು, ಮಂಗಳಮುಖಿಯಾದ ಕಾರಣ ಸ್ಥಳೀಯರು ಮನೆ ಕೊಡಲು ನಿರಾಕರಣೆ ಮಾಡುತ್ತಿದ್ದಾರೆ. ಮನೆ ಖಾಲಿಯಿದ್ದರೂ ಇಲ್ಲ ಎನ್ನುತ್ತಾರೆ. ಲಾಡ್ಜ್ ಗಳಿಗೆ ದುಬಾರಿ ಮೊತ್ತದ ಬಾಡಿಗೆ ಹಣ ನೀಡಿ ಸಾಕಾಗಿದೆ. ಖರ್ಚು ವೆಚ್ಚಕ್ಕೆ ಅತಿಯಾದ ಸಮಸ್ಯೆ ಎದುರಾಗಿದೆ. ಕೊಡಗಿನ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.ಮಂಗಳ ಮುಖಿಯರಿಗೆ ಬದುಕುವ ಹಕ್ಕಿಲ್ಲವೇ, ಸಮಾಜ ನಮ್ಮನ್ನು ಏಕೆ ಕೆಟ್ಟ ದೃಷ್ಟಿಯಲ್ಲಿ ನೋಡುತ್ತದೆ. ನಾವೇನು ಭಿಕ್ಷೆ ಕೇಳುತ್ತಿಲ್ಲ. ಹಣ ನೀಡುತ್ತೇವೆ ಎಂದರೂ ಮನೆ ಕೊಡುತ್ತಿಲ್ಲ ಎಂದು ತನಗೆ ಎದುರಾಗಿರುವ ಸಮಸ್ಯೆಯ ಬಗ್ಗೆ ರಿಹಾನ ಅಳಲನ್ನು ತೋಡಿಕೊಂಡಿದ್ದಾರೆ. ಜೀವನಕ್ಕಾಗಿ ಭಿಕ್ಷಾಟನೆ ನಡೆಸುತ್ತಿರುವ ರಿಹಾನಾ ಅವರು, ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದು, ಯಾವುದೇ ಸಹಕಾರ ದೊರೆಯದ ಕಾರಣ ದಯಾಮರಣಕ್ಕೆ ಅನುವು ಮಾಡುವಂತೆ  ಅರ್ಜಿ ಸಲ್ಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆ.1ರಂದು ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ:ವಿಜಯೇಂದ್ರ

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ: ಎಸ್.ಆರ್.ವಿಶ್ವನಾಥ್

ಟಿಪ್ಪು ಸುಲ್ತಾನ್ ದಸರಾ ಮಾಡಿದ್ರು: ತನ್ವೀರ್ ಸೇಠ್ ಹೇಳಿಕೆ

ಬಾನು ಮುಷ್ತಾಕ್ ಹಿಂದೂ ಸಂಸ್ಕೃತಿ ಒಪ್ಪಿ ಬರ್ತಾರಾ: ಬಿವೈ ವಿಜಯೇಂದ್ರ

ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಸೂಚಿಸಿದ ದೆಹಲಿ ನಾಯಕ ಯಾರು: ತೇಜಸ್ವಿ ಸೂರ್ಯ

ಮುಂದಿನ ಸುದ್ದಿ
Show comments