Webdunia - Bharat's app for daily news and videos

Install App

ಅಮೆರಿಕ ಮತ್ತು ರಷ್ಯಾದ ಮಧ್ಯೆ ಯುದ್ಧವಾದರೆ 5 ಕೋಟಿ ಜನರ ಸಾವು ಸಾಧ್ಯತೆ- ರುಟ್ಗರ್ಸ್ ವಿವಿ ವರದಿ

Webdunia
ಗುರುವಾರ, 18 ಆಗಸ್ಟ್ 2022 (14:48 IST)
ಆಧುನಿಕ ಪರಮಾಣು ಯುದ್ಧದಲ್ಲಿ ಜಾಗತಿಕ ಕ್ಷಾಮದ ಪ್ರಭಾವದಿಂದ 5 ಶತಕೋಟಿ ಜನರು ಸಾವನ್ನಪ್ಪುತ್ತಾರೆ ಎಂದು ನ್ಯೂಜೆರ್ಸಿಯ ರುಟ್ಗರ್ಸ್ ವಿವಿಯ ವಿಜ್ಞಾನಿಗಳ ವರದಿ ಹೇಳಿದೆ. 

ಮಾರಣಾಂತಿಕ ಸ್ಫೋಟಗಳಿಂದ ಸಂಭವಿಸುವ ಸಾವುನೋವುಗಳನ್ನು ಮೀರಿಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಜ್ಞಾನಿಗಳ ತಂಡ 6 ಸಂಭಾವ್ಯ ಪರಮಾಣು ಸಂಘರ್ಷದ ಸನ್ನಿವೇಶಗಳ ಪರಿಣಾಮವನ್ನು ಗುರುತಿಸಿದೆ. ಅಮೆರಿಕ-ರಶ್ಯ ನಡುವಿನ ಪೂರ್ಣಪ್ರಮಾಣದ ಪರಮಾಣು ಯುದ್ಧವು ಮನುಕುಲದ ಅರ್ಧದಷ್ಟನ್ನು ನಾಶಗೊಳಿಸಬಹುದು ಎಂದು 'ನೇಚರ್ ಫುಡ್' ಪತ್ರಿಕೆಯಲ್ಲಿ ಪ್ರಕಟವಾದ ವರದಿ ಉಲ್ಲೇಖಿಸಿದೆ.ಪರಮಾಣು ಶಸ್ತ್ರಾಸ್ತ್ರಗಳ ಸ್ಫೋಟದಿಂದ ಉರಿಯುವ ಬೆಂಕಿಯಿಂದ ಎಷ್ಟು ಪ್ರಮಾಣದ ಮಸಿ ವಾತಾವರಣಕ್ಕೆ ಸೇರಿಕೊಳ್ಳುತ್ತದೆ ಎಂಬ ಲೆಕ್ಕಾಚಾರದ ಮೇಲೆ ಈ ಅಂದಾಜು ಮಾಡಲಾಗಿದೆ. ಸಣ್ಣ ಪ್ರಮಾಣದ ಸಂಘರ್ಷವೂ ಜಾಗತಿಕ ಆಹಾರ ಉತ್ಪಾದನೆಯ ಮೇಲೆ ವಿನಾಶಕಾರಿ ಪರಿಣಾಮ ಬೀರಬಹುದು.ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಥಳೀಯ ಯುದ್ಧವು 5 ವರ್ಷದೊಳಗೆ ಬೆಳೆ ಇಳುವರಿಯಲ್ಲಿ ಸುಮಾರು 7% ಕುಸಿತಕ್ಕೆ ಕಾರಣವಾಗಬಹುದು. ಆದರೆ ಅಮೆರಿಕ-ರಶ್ಯ ಯುದ್ಧವು 3ರಿಂದ 4 ವರ್ಷದಲ್ಲೇ ಆಹಾರ ಉತ್ಪಾದನೆಯಲ್ಲಿ 90%ದಷ್ಟು ಕುಸಿತಕ್ಕೆ ಕಾರಣವಾಗಬಹುದು ಎಂದು ನ್ಯೂಜೆರ್ಸಿಯ ರುಟ್ಗರ್ಸ್ ವಿವಿಯ ವಿಜ್ಞಾನಿಗಳ ವರದಿ ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments