ಮಂಡ್ಯ ಗೌಡ್ತಿ ಬಿರುದು ಸುಮಲತಾ ಅಂಬರೀಶ್ ಗೆ ಕೊಟ್ಟಿದ್ಯಾರು?

Webdunia
ಗುರುವಾರ, 7 ಮಾರ್ಚ್ 2019 (16:28 IST)
ಮಂಡ್ಯದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸೋದು ಖಚಿತವಾಗಿದೆ. ಇನ್ನು  ಕಾಂಗ್ರೆಸ್ ಟಿಕೆಟ್ ನಿರಾಕರಣೆ ಬೆನ್ನಲ್ಲೇ ಪಕ್ಷೇತರವಾಗಿ ಸ್ಪರ್ಧಿಸೋ ನಿಟ್ಟಿನಲ್ಲಿ ಸುಮಲತಾ ಮತ್ತಷ್ಟು ಆಕ್ಟೀವ್ ಆಗಿದ್ದು, ಏಕಾಂಗಿಯಾಗಿಯೇ ಕ್ಷೇತ್ರ ಪರ್ಯಟನೆ ಕೈಗೊಂಡಿದ್ದಾರೆ.

ಸುಮಲತಾ ಅಂಬರೀಶ್ ಇಂದು ಕೂಡ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಿಂಚಿನ ಸಂಚಾರ ಮಾಡಿದರು. ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ನಿನ್ನೆಯಷ್ಟೇ ಕೈ ಪಡೆ ಸುಮಲತಾಗೆ ಮಂಡ್ಯ ಕ್ಷೇತ್ರದ ಟಿಕೆಟ್ ನಿರಾಕರಣೆ ಮಾಡಿತ್ತು. ಕೈ ಟಿಕೆಟ್ ನಿರಾಕರಣೆ ನಡುವೆಯೇ ಫುಲ್ ಆಕ್ಟೀವ್ ಆಗಿರುವ ಸುಮಲತಾ ಕ್ಷೇತ್ರ ಪರ್ಯಟನೆ ಮುಂದುವರಿಸಿದ್ದು, ಹೋದಲ್ಲೆಲ್ಲ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. 

ಮಂಡ್ಯದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಾದ್ಯಂತ ಸುಮಲತಾ ಅಂಬರೀಷ್  ಮಿಂಚಿನ ಸಂಚಾರ ಮಾಡಿದ್ರು.  ದಾರಿಯುದ್ದಕ್ಕೂ ಸುಮಲತಾಗೆ ಅಭೂತಪೂರ್ವ ಸ್ವಾಗತ ಕೋರಲಾಯ್ತು. ಎತ್ತಿನಗಾಡಿ, ತೆರೆದ ವಾಹನಗಳಲ್ಲಿ ಕೆಲವೊಂದು ಗ್ರಾಮಗಳಲ್ಲಿ ಮೆರವಣಿಗೆ ಕೂಡ ನಡೆಸಲಾಯ್ತು. ಇನ್ನು ಆಯಾ ಗ್ರಾಮಗಳ ಮಹಿಳೆಯರು, ಸುಮಲತಾಗೆ ತುಂಬಿದ ಕೊಡ, ಕಳಸಗಳೊಂದಿಗೆ ಪೂರ್ಣ ಕುಂಭ ಸ್ವಾಗತ ಕೋರಿದ್ರು. ಇದೇ ವೇಳೆ ಅಭಿಮಾನಿಗಳು ಮಂಡ್ಯ ಗೌಡ್ತಿಗೆ ಜೈ ಅನ್ನೋ ಮೂಲಕ ಸುಮಲತಾಗೆ ಮಂಡ್ಯ ಗೌಡ್ತಿ ಬಿರುದು ನೀಡಿದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಲಗಿ, ಮಲಗಿರಿ, ಜನ ಒದ್ದೋಡಿಸುವವರೆಗೂ ಎಳೆಬೇಡಿ, ಡಿಕೆ ಶಿವಕುಮಾರ್ ಕುಟುಕಿದ ಆರ್‌ ಅಶೋಕ್‌

ಆರ್‌ಎಸ್‌ಎಸ್‌ ಪ್ರಧಾನ ಕಚೇರಿ ಐಷರಾಮಿ ಹೋಟೆಲ್‌ನಂತಿದೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

Indigo Crisis: ಇಂದು ಬೆಂಗಳೂರಿನಲ್ಲಿ ರದ್ದಾದ ವಿಮಾನದ ಪಟ್ಟಿ ಕೇಳಿದ್ರೆ ಶಾಕ್

ಗೋವಾ ಪಬ್‌ ದುರಂತ, ಮಾಲೀಕರ ವಿರುದ್ಧ ಕ್ರಮಕ್ಕೆ ಪ್ರತ್ಯಕ್ಷದರ್ಶಿಗಳು ಒತ್ತಾಯ

ಜನೌಷಧಿ ಕೇಂದ್ರ ಸ್ಥಗಿತ ರದ್ದುಗೊಳಿಸಿದ ಕೋರ್ಟ್ ನಿರ್ಧಾರದ ಬಗ್ಗೆ ವಿಜಯೇಂದ್ರ ಹೇಳಿದ್ದೇನು

ಮುಂದಿನ ಸುದ್ದಿ
Show comments