Select Your Language

Notifications

webdunia
webdunia
webdunia
webdunia

ಬಾರ್ ಲೈಸೆನ್ಸ್ ಗೆ ಚೆಲುವರಾಯಸ್ವಾಮಿ ನೇತೃತ್ವದಲ್ಲೇ ಲಂಚ: ಮೋದಿ ಹೇಳಿದ ಮಾತು ಸತ್ಯವಾಯ್ತು

Cheluvaraya Swamy

Krishnaveni K

ಮಂಡ್ಯ , ಶುಕ್ರವಾರ, 29 ನವೆಂಬರ್ 2024 (10:20 IST)
ಮಂಡ್ಯ: ಬಾರ್ ಗೆ ಲೈಸೆನ್ಸ್ ನೀಡಲು ಲಂಚ ಪಡೆದ ಆರೋಪದಲ್ಲಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಆರೋಪ ಕೇಳಿಬಂದಿದ್ದು, ಅಂದು ಪ್ರಧಾನಿ ಮೋದಿ ರಾಜ್ಯದ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನೀಡಿದ್ದ ಹೇಳಿಕೆ ಸತ್ಯವೆಂದು ಅನಿಸುತ್ತಿದೆ.

ಮಂಡ್ಯದ ಚಂದೂಪರದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ಗೆ ಲೈಸೆನ್ಸ್ ನೀಡಲು ಲಂಚ ಪಡೆಯಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ಸಂಬಂಧ ದೂರುದಾರರು ಅಡಿಯೋ ಮತ್ತು  ವಿಡಿಯೋ ತುಣುಕನ್ನೂ ನೀಡಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಈ ಅಡಿಯೋದಲ್ಲಿ ಸಚಿವ ಚೆಲುವರಾಯಸ್ವಾಮಿಯ ಹೆಸರು ಪ್ರಸ್ತಾಪವಾಗಿದೆ. ಅವರ ನೇತೃತ್ವದಲ್ಲೇ ಲಂಚ ಪಡೆಯಲಾಗುತ್ತಿದೆ ಎಂದು ಆರೋಪವಿದೆ. ಸಚಿವರ ಮುಂದಾಳತ್ವದಲ್ಲೇ ಲೈಸೆನ್ಸ್ ಪಡೆಯಲು ಲಂಚದ ರೇಟ್ ಫಿಕ್ಸ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈಗ ಎಫ್ಐಆರ್ ದಾಖಲಾದರೆ ಸಚಿವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಈ ಹಿಂದೆ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮಾಸಿಕವಾಗಿ ಇಂತಿಷ್ಟು ಎಂದು ವಸೂಲಿ ದಂಧೆ ನಡೆಯುತ್ತಿದೆ ಎಂದಿದ್ದರು. ಒಂದು ವೇಳೆ ಈಗ ಚೆಲುವರಾಯಸ್ವಾಮಿ ವಿರುದ್ಧ ಆರೋಪ ನಿಜವಾದರೆ ಮೋದಿ ಹೇಳಿದ ಮಾತು ಸತ್ಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಸಿಕ್ಯೂಷನ್ ಗೆ ಅನುಮತಿಗೂ ಮೊದಲೇ ಬಿಎಸ್ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ತನಿಖೆ ಶುರು