Select Your Language

Notifications

webdunia
webdunia
webdunia
webdunia

ಸಿಎನ್ಜಿ ವಾಹನಗಳ ಸಿಲಿಂಡರ್ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆ : ಸಾರಿಗೆ ಇಲಾಖೆ

ಸಿಎನ್ಜಿ ವಾಹನಗಳ ಸಿಲಿಂಡರ್ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆ : ಸಾರಿಗೆ ಇಲಾಖೆ
ಬೆಂಗಳೂರು , ಮಂಗಳವಾರ, 7 ಫೆಬ್ರವರಿ 2023 (10:49 IST)
ಬೆಂಗಳೂರು : ಕರ್ನಾಟಕದಲ್ಲಿರುವ ಎಲ್ಲಾ ಸಿಎನ್ಜಿ ವಾಹನ ಮಾಲೀಕರು ತಮ್ಮ ವಾಹನಗಳ ಸಿಲಿಂಡರ್ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಜನವರಿ 9 ರಂದು ಹೊರಡಿಸಲಾದ ಈ ಸುತ್ತೋಲೆಯು ಸಿಎನ್ಜಿ ವಾಹನಗಳಿಗೆ ರಾಷ್ಟ್ರೀಯ ಮಾರ್ಗಸೂಚಿಗಳ ಅನುಗುಣವಾಗಿದೆ. ವಾಹನ ಮಾಲೀಕರು ಮೂರು ವರ್ಷಗಳಿಗೊಮ್ಮೆ ಪ್ರತಿಯೊಂದು ಸಿಲಿಂಡರ್ ಅನ್ನು ʼಹೈಡ್ರೋಸ್ಟಾಟಿಕ್ ಸ್ಟ್ರೆಚ್ʼ ಪರೀಕ್ಷೆಗಳನ್ನು ನಡೆಸುವುದು ಕಡ್ಡಾಯ ಎಂದು ತಿಳಿಸಿದೆ.

ಗ್ಯಾಸ್ ಆಥಾರಿಟಿ ಆಫ್ ಇಂಡಿಯಾ ಲಿಮಿಟೆಡ್, ರಾಜ್ಯದ ಅತಿದೊಡ್ಡ ಸಿಎನ್ಜಿ ಪೂರೈಕೆದಾರರಾಗಿದ್ದು ಇದು ಕರ್ನಾಟಕದಲ್ಲಿ 52,000 ಸಿಎನ್ಜಿ ವಾಹನಗಳಿವೆ ಎಂದು ಅಂದಾಜಿಸಿದೆ.

ಅದರಲ್ಲಿ 48% ಅಥವಾ ಸುಮಾರು 25,000 ಬೆಂಗಳೂರಿನಲ್ಲಿವೆ. ಈ ಮಾಹಿತಿಯಲ್ಲಿ ಆಫ್ಟರ್ ಮಾರ್ಕೆಟ್ ನಲ್ಲಿ ಸಿಎನ್ಜಿ ಸಿಲಿಂಡರ್ ಗಳನ್ನು ಆಳವಡಿಸಿದ ವಾಹನಗಳು ಮತ್ತು ಉಂIಐ ನಿಂದ ಸರಬರಾಜು ಮಾಡಲಾದ ವಾಹನಗಳನ್ನು ಒಳಗೊಂಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬೋಟ್ ಖರೀದಿಗೆ ನಿರುತ್ಸಾಹ ತೋರಿದ ಕರಾವಳಿ ಮೀನುಗಾರರು?