Publish Date: Tue, 31 Oct 2023 (12:10 IST)
Updated Date: Tue, 31 Oct 2023 (10:08 IST)
ಬೆಂಗಳೂರು: ನಗರದ ಪ್ರತಿಷ್ಠಿತ ಮಾಲ್ ಒಂದರಲ್ಲಿ ಮಹಿಳೆಯರೊಂದಿಗೆ ಎಲ್ಲೆಂದರಲ್ಲಿ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾನುವಾರ ಮಾಲ್ ನಲ್ಲಿ ಜನಜಂಗಳಿಯ ನಡುವೆ ಯುವತಿಯೊಬ್ಬಳ ಖಾಸಗಿ ಅಂಗಾಂಗವನ್ನು ಸ್ಪರ್ಶಿಸಿ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ಓರ್ವ ಯುವಕ ವಿಡಿಯೋ ಮಾಡಿ ಮಾಲ್ ನ ಭದ್ರತಾ ಸಿಬ್ಬಂದಿಗೂ ವಿಷಯ ತಿಳಿಸಿದ್ದಾನೆ.
ಆದರೆ ಸಿಬ್ಬಂದಿಯ ಕೈಗೆ ಸಿಗದೇ ವ್ಯಕ್ತಿ ಪರಾರಿಯಾಗಿದ್ದಾನೆ. ಈ ಬಗ್ಗೆ ಯಾರೂ ಪೊಲೀಸರಿಗೆ ಲಿಖಿತ ದೂರು ನೀಡಿಲ್ಲ. ಹಾಗಿದ್ದರೂ ವಿಡಿಯೋ ಗಮನಿಸಿ ಮಾಗಡಿ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.