Webdunia - Bharat's app for daily news and videos

Install App

ಹೆಂಡತಿ ಶೀಲ ಶಂಕಿಸಿ ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ!

Webdunia
ಭಾನುವಾರ, 19 ಡಿಸೆಂಬರ್ 2021 (08:07 IST)
ಬಳ್ಳಾರಿ : ಹೆಂಡತಿ ಶೀಲ ಶಂಕಿಸಿ ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
 
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನವಲಟ್ಟಿ ಗ್ರಾಮದ ನಾಗರಾಜ್ ಎಂಬಾತನಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ಜೀವಾವಧಿ ಶಿಕ್ಷೆ ವಿಧಿಸಿದೆ. 

2016 ಡಿಸೆಂಬರ್ 7ರಂದು ಮನೆಯಲ್ಲಿದ್ದ ಪತ್ನಿ ಜಾನಕಿ ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಳ್ಳುವಂತೆ ಒತ್ತಾಯ ಮಾಡಿದ್ದಲ್ಲದೆ, ತಾನೇ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಿರುವುದು ಪೊಲೀಸ್ ವಿಚಾರಣೆಯಲ್ಲಿ ದೃಢಪಟ್ಟಿದೆ.

ಆರೋಪದ ಕುರಿತು ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ವಿನಯ್ ಅವರು, ಅಪರಾಧಿಗೆ 3 ವರ್ಷಗಳ ಸಾದಾ ಸಜೆ, 25 ಸಾವಿರ ರೂ. ದಂಡ ಶಿಕ್ಷೆ ವಿಧಿಸಿದ್ದಾರೆ. ತಪ್ಪಿದ್ದಲ್ಲಿ ಮತ್ತೆ 6 ತಿಂಗಳ ಸಾದ ಸಜೆ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. 

ಇದರ ಜತೆಗೆ ಮತ್ತೆ 75 ಸಾವಿರ ರೂ. ದಂಡ ವಿಧಿಸಿದ್ದು, ಸದರಿ ಹಣದಲ್ಲಿ ಶೇ.90 ಭಾಗವನ್ನು ಮಕ್ಕಳಿಗೆ ಕೊಡಬೇಕು. ಒಂದು ವೇಳೆ ಈ ದಂಡದ ಮೊತ್ತ ಪಾವತಿ ಮಾಡದಿದ್ದಲ್ಲಿ 6 ತಿಂಗಳ ಸಾದ ಸಜೆಯ ನೀಡಲಾಗುತ್ತದೆ ಎಂದು ಡಿ.14ರಂದು ತೀರ್ಪು ಪ್ರಕಟಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

DK Shivakumar: ಕೇಂದ್ರ ಚಿನ್ನದ ಬೆಲೆ ಏರಿಕೆ ಮಾಡಿ ಮಹಿಳೆಯರು ಮಾಂಗಲ್ಯ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಾಗಿದೆ: ಡಿಕೆ ಶಿವಕುಮಾರ್

ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಗುಟ್ಟಾಗಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಸಿಂಹದ ಹಾಗೇ ನಾಯಿಗಳನ್ನು ಸಾಕಿಕೊಂಡಿರುವ ಶ್ವಾನಪ್ರೇಮಿ ಸತೀಶ್‌ಗೆ ಇಡಿ ಶಾಕ್‌, ತನಿಖೆಯಲ್ಲಿ ಗೊತ್ತಾಯ್ತು ಅಸಲಿಯತ್ತು

Karnataka: ಪೋಷಕರ ಸಂದರ್ಶನ ಮಾಡುವಂತಿಲ್ಲ, ಹೆಚ್ಚು ಫೀಸ್ ಕೇಳೋ ಹಾಗಿಲ್ಲ: ಖಾಸಗಿ ಶಾಲೆಗಳಿಗೆ ಹೊಸ ರೂಲ್ಸ್ ಇಲ್ಲಿದೆ

ಮುಂದಿನ ಸುದ್ದಿ
Show comments