Bengaluru: ಬೆಂಗಳೂರು ಏರ್ ಪೋರ್ಟ್ ನ ಈ ರೆಸ್ಟೋರೆಂಟ್ ನಲ್ಲಿ ಹಾರ್ಲಿಕ್ಸ್ ಗೆ ಎಷ್ಟು ದರ ನೋಡಿ

Krishnaveni K
ಸೋಮವಾರ, 2 ಜೂನ್ 2025 (11:15 IST)
Photo Credit: X
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯ ಔಟ್ ಲೆಟ್ ನಲ್ಲಿ ಆಹಾರಗಳ ಬೆಲೆಗಳನ್ನು ಪಟ್ಟಿ ಮಾಡಿ ಎಕ್ಸ್ ಬಳಕೆದಾರರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದರಲ್ಲಿ ಹಾರ್ಲಿಕ್ಸ್ ದರ ನೋಡಿದರೆ ನಿಮಗೆ ಶಾಕ್ ಆಗಬಹುದು.

ವಿಶ್ವದ ಯಾವುದೇ ವಿಮಾನ ನಿಲ್ದಾಣಗಳಲ್ಲೂ ಆಹಾರ ಖರೀದಿಸುವುದು ಎಂದರೆ ದುಬಾರಿಯೇ. ಆಹಾರಗಳು, ಪಾನೀಯಗಳು, ಹೊರಗಿನ ಮಾರುಕಟ್ಟೆಗಿಂತ ಮೂರು ಪಟ್ಟು ಹೆಚ್ಚೇ ಬೆಲೆಯಿರುತ್ತದೆ.

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ರಾಮೇಶ್ವರಂ ಕೆಫೆಯ ಔಟ್ ಲೆಟ್ ಇದೆ. ಈ ಕೆಫೆಗೆ ಹೋಗಿ ತಿಂಡಿಯ ರುಚಿ ಸವಿಯೋಣ ಎಂದು ಹೋದ ಗ್ರಾಹಕರೊಬ್ಬರು ಇಲ್ಲಿನ ಬೆಲೆ ಹಂಚಿಕೊಂಡಿದ್ದಾರೆ. ಬೆಂಗಳೂರು ಮೆಟ್ರೋ ಅಪ್ ಡೇಟ್ಸ್ ಎಂಬ ಎಕ್ಸ್ ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯ ವರ್ಗದವರಿಗೆ ಇಲ್ಲಿ ಒಂದು ಹಾರ್ಲಿಕ್ಸ್ ಸೇವನೆ ಮಾಡುವುದೂ ಕಷ್ಟ ಎಂದಿದ್ದಾರೆ.

ಒಂದು ಲೋಟ ಹಾರ್ಲಿಕ್ಸ್ ಗೆ ಇಲ್ಲಿ 157.5 ರೂ. ಬೆಲೆಯಿದೆ. ಕಾಫಿಗೆ 180 ರೂ.ಗಳಿವೆ. ಕಡಿಮೆ ಬೆಲೆ ಎಂದರೆ ಅರ್ಧ ಲೀಟರ್ ನೀರು. ಇದಕ್ಕೆ ಕೇವಲ 70 ರೂ.ಗಳು! ಬೆಲೆ ನೋಡಿಯೇ ನಾನು ಏನೂ ಆರ್ಡರ್ ಮಾಡದೆ ಬಂದೆ ಎಂದು ಗ್ರಾಹಕ ಬರೆದುಕೊಂಡಿದ್ದಾರೆ. ಏರ್ ಪೋರ್ಟ್ ನಲ್ಲಿ ಈ ರೀತಿ ಬೆಲೆ ಸಾಮಾನ್ಯವೇ ಆದರೂ ಮಧ್ಯಮ ವರ್ಗದ ಪ್ರಯಾಣಿಕರು ಏರ್ ಪೋರ್ಟ್ ನಲ್ಲಿ ಏನಾದರೂ ತಿನ್ನಬೇಕು ಎಂದರೆ ಯೋಚನೆ ಮಾಡಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನಾ ಬಿಗ್ ಸ್ಕೆಚ್ ಹಾಕಿದ್ದ ಮೋಸ್ಟ್ ವಾಟೆಂಡ್ ಗ್ಯಾಂಗ್‌ ಎನ್‌ಕೌಂಟರ್‌

ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು: ಮಂಡಳಿಯ ಹಿರಿಯ ಅಧಿಕಾರಿ ಅರೆಸ್ಟ್‌

ಆರ್ ಎಸ್ಎಸ್ ಪಥಸಂಚಲನದ ಫೋಟೋ ಎಡಿಟ್ ಮಾಡಿತಾ ಭೀಮ್ ಆರ್ಮಿ: ಫುಲ್ ಟ್ರೋಲ್

ದೀಪಾವಳಿ ಸಂದರ್ಭದಲ್ಲಿ ಅವಘಡ: ಕೊಬ್ಬರಿ ಹೋರಿ ಸ್ಪರ್ಧೆಯ ಹೋರಿ ತಿವಿದು ಮೂವರು ಸಾವು

ಡಾ ಕೃತಿಕಾ ರೆಡ್ಡಿ ಮರ್ಡರ್ ಮಾಡಿದ್ದ ಡಾ ಮಹೇಂದ್ರ ಅಸಲಿ ವಿಚಾರಗಳು ಕೊನೆಗೂ ಬಯಲು

ಮುಂದಿನ ಸುದ್ದಿ
Show comments