ಆನೇಕಲ್: ಆಸ್ತಿ ಕೈತಪ್ಪಿ ಹೋಗುತ್ತದೆಂಬ ದುರಾಸೆಗೆ ಬಿದ್ದ ವ್ಯಕ್ತಿ ಬಾಮೈದನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.
22 ವರ್ಷದ ಯುವಕ ಕೊಲೆಗೀಡಾಗಿದ್ದಾನೆ. ಈತನನ್ನು ಬಾವನೇ ಬೆಲ್ಟ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹೆಂಡತಿಯ ಆಸ್ತಿ ತನಗೆ ಬಾರದೇ ಬಾಮೈದನಿಗೆ ಹೋಗುತ್ತದೆಂದು ತಿಳಿದು ಬಾವನೇ ಈ ಕೃತ್ಯವೆಸಗಿದ್ದಾನೆ. ಕಳೆದ ತಿಂಗಳು ಕೊಲೆಗೀಡಾದ ಯುವಕನ ಪೋಷಕರು ಆತ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದ ಪೊಲೀಸರು ಸತ್ಯ ಬಯಲಿಗೆಳೆದಿದ್ದಾರೆ.