Publish Date: Tue, 28 Feb 2017 (08:28 IST)
Updated Date: Tue, 28 Feb 2017 (08:35 IST)
ಪತ್ನಿ ಮತ್ತು ಮಗುವಿಗೆ ವಿಷ ಉಣಿಸಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು ಸಂಪೂರ್ಣ ಕುಟುಂಬ ದಾರುಣವಾಗಿ ಅಂತ್ಯ ಕಂಡಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯಲಹಂಕದ ಸೋಮೇಶ್ವರ ನಗರದಲ್ಲಿ ಈ ಹೇಯ ಕೃತ್ಯ ನಡೆದಿದ್ದು ಮೃತರನ್ನು ಅಮಿತ್ ಕುಮಾರ್ ಝಾ, ಪತ್ನಿ ಮೀನಾಕ್ಷಿ ಝಾ ಮತ್ತು ಪುತ್ರಿ ಮಾನ್ಯ(3) ಎಂದು ಗುರುತಿಸಲಾಗಿದೆ.
ದಂಪತಿ ಬಿಟೆಕ್ ಪದವೀಧರರಾಗಿದ್ದು ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು.
ಪತ್ನಿ ಮೀನಾಕ್ಷಿ ''ಶೆಮ್ ರಾಕ್'' ಎಂಬ ಪ್ರಿ ನರ್ಸರಿ ಶಾಲೆಯನ್ನು ನಡೆಸುತ್ತಿದ್ದು ಮದ್ಯವ್ಯಸನಿ ಪತಿ ನಿರುದ್ಯೋಗಿಯಾಗಿ ಓಡಾಡಿಕೊಂಡಿದ್ದ. ಹೀಗಾಗಿ ಪತಿ-ಪತ್ನಿ ಮಧ್ಯೆ ಆಗಾಗ ಜಗಳವಾಗುತಿತ್ತು. ಭಾನುವಾರ ಸಹ ಇಬ್ಬರ ಮಧ್ಯೆ ಜಗಳವಾಗಿದ್ದು ಕೋಫದ ಭರದಲ್ಲಿ ಅಮಿತ್ ಪತ್ನಿ ಮತ್ತು ಪುತ್ರಿಯನ್ನು ಕೊಂದು ತಾನು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೋಮವಾರ ಮೀನಾಕ್ಷಿ ಶಾಲೆಗೆ ಬರದಿದ್ದಾಗ ಶಾಲೆಯ ಆಯಾ ಮನೆ ಬಳಿ ಬಂದು ಮಾಲೀಕರಿಗೆ ಈ ಕುರಿತು ತಿಳಿಸಿದ್ದಾಳೆ. ಕಿಟಕಿ ಮೂಲಕ ಒಳಗೆ ಇಣುಕಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.