Select Your Language

Notifications

webdunia
webdunia
webdunia
webdunia

ಆನ್‌ಲೈನ್, ಎಟಿಎಂ ಮತ್ತು ಖಾಸಗಿ ಬ್ಯಾಂಕ್ ಬಂದ್ ಇಲ್ಲ

ಬ್ಯಾಂಕ್ ಮುಷ್ಕರ
ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಒತ್ತಾಯಿಸಿ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಇಂದು (ಫೆ.28) ಒಂದು ದಿನದ ಬಂದ್‌ಗೆ ಕರೆ ಕೊಟ್ಟಿವೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಇಂದು ಇರುವುದಿಲ್ಲ. ಆದರೆ ಎಟಿಎಂ, ಆನ್‌ಲೈನ್ ಹಾಗೂ ಖಾಸಗಿ ಬ್ಯಾಂಕ್‍ಗಳು ಎಂದಿನಂತೆ ಕಾರ್ಯರ್ನಿವಹಿಸಲಿವೆ.
 
ಖಾಸಗಿ ಬ್ಯಾಂಕ್‌ಗಳಾದ ಐಸಿಐಸಿಐ, ಎಚ್‌ಡಿಎಫ್‍ಸಿ, ಆಕ್ಸಿಸ್, ಕೋಟಕ್ ಮಹೀಂದ್ರಾ ಬ್ಯಾಂಕ್‌ಗಳು ಎಂದಿನಂತಂತೆ ಕಾರ್ಯನಿರ್ವಹಿಸಲಿವೆ. ಆದರೆ ಚೆಕ್ ಕ್ಲಿಯರೆನ್ಸ್ ವಿಳಂಬವಾಗುವ ಸಾಧ್ಯತೆ ಇದೆ. 
 
ಯುಎಫ್‌ಬಿಯು ವ್ಯಾಪ್ತಿಗೆ ಬರುವ ಒಂಬತ್ತು ಒಕ್ಕೂಟಗಳು ಮುಷ್ಕರದಲ್ಲಿ ಭಾಗವಹಿಸಲಿವೆ. ಆದರೆ ಭಾರತೀಯ ಮಜ್ದೂರ್ ಸಂಘದ ಜತೆ ಗುರುತಿಸಿಕೊಂಡಿರುವ ಬ್ಯಾಂಕ್ ನೌಕರರ ರಾಷ್ಟ್ರೀಯ ಸಂಘಟನೆ (ಎನ್‌ಒಬಿಡಬ್ಲ್ಯು) ಮುಷ್ಕರದಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರೋಮಿಂಗ್ ಶುಲ್ಕ ರದ್ದು ಮಾಡಿದ ಭಾರ್ತಿ ಏರ್‌ಟೆಲ್