Select Your Language

Notifications

webdunia
webdunia
webdunia
webdunia

ಸೆಕ್ಸ್ ಸುಖ ನೀಡು, ಇಲ್ಲಾ ಹಣ ಕೊಡು ಎಂದು ಪೀಡಿಸುತ್ತಿದ್ದ ಕಾಮುಕ ಅಂದರ್

ಸೆಕ್ಸ್ ಸುಖ ನೀಡು, ಇಲ್ಲಾ ಹಣ ಕೊಡು ಎಂದು ಪೀಡಿಸುತ್ತಿದ್ದ ಕಾಮುಕ ಅಂದರ್
ಬೆಂಗಳೂರು: , ಬುಧವಾರ, 25 ಅಕ್ಟೋಬರ್ 2017 (18:52 IST)
ಸೆಕ್ಸ್ ಸುಖ ಮತ್ತು ಹಣಕ್ಕಾಗಿ ಸಹದ್ಯೋಗಿಯೊಬ್ಬಳಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ 30 ವರ್ಷದ ಆರೋಪಿಯನ್ನು ಕಮರ್ಶಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ  
ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ನಾರಾಯಣ ಪ್ರಭು ಎಂಬಾತನನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.
 
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಪ್ರಭು, ಟ್ರಾವೆಲ್ ಮ್ಯಾನೇಜ್‌ಮೆಂಟ್, ಹಾಸ್ಪಿಟಾಲಿಟಿ ಮತ್ತು ವಿಮಾನಯಾನ ಕ್ಷೇತ್ರ ಅರಸಿ ಬರುವ ಯುವಕರಿಗೆ ತರಬೇತಿ ನೀಡುವ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದನು. ಜಾಹೀರಾತುಗಳಲ್ಲಿ ಸಿನೆಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ಯುವತಿಗೆ ನಂಬಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 
ಆರೋಪಿ ಪ್ರಭು ಗ್ಲಾಮರ್ ಪೋರ್ಟ್‌ಫೋಲಿಯೋ ಸೃಷ್ಟಿಸುವುದಾಗಿ ನೆಪವೊಡ್ಡಿ ಯುವತಿಯೊಬ್ಬಳ ಅರೆನಗ್ನ ಚಿತ್ರಗಳನ್ನು ಕ್ಲಿಕ್ಕಿಸಿದ್ದಾನೆ. ನಂತರ ಸೆಕ್ಸ್ ಸುಖ ಮತ್ತು ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಹಲವಾರು ಬಾರಿ ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಯುವತಿಗೆ ರವಾನಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ನಗ್ನ ಚಿತ್ರಗಳೊಂದಿಗೆ ಯುವತಿಯ ಚಿತ್ರವನ್ನು ಜೋಡಿಸಿ ಇಂಟರ್‌‌ನೆಟ್‌ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಯುವತಿಗೆ, ನಿಮ್ಮ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ.
 
ಆರೋಪಿ ಪ್ರಭು ಕಿರುಕುಳ ಸಹಿಸಲಾಗದ ಯುವತಿ, ಕಮರ್ಶಿಯಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿ ನಾರಾಯಣ ಪ್ರಭುನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ
 
ಆರೋಪಿ ಪ್ರಭು ನನಗೆ 3 ಲಕ್ಷ ರೂಪಾಯಿಗಳನ್ನು ಕೊಡು ಇಲ್ಲವಾದಲ್ಲಿ ಸೆಕ್ಸ್ ಸುಖ ಕೊಡು ಎಂದು ಒತ್ತಾಯಿಸುತ್ತಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
 
ಆರೋಪಿ ನಾರಾಯಣ್ ಪ್ರಭು ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಪಟೇಲ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ