Publish Date: Tue, 27 Jun 2017 (15:07 IST)
Updated Date: Tue, 27 Jun 2017 (15:11 IST)
ಬೆಂಗಳೂರು:75ಕ್ಕೂ ಹೆಚ್ಚು ಮಹಿಳೆಯರನ್ನು ಹಾಗೂ ಯುವತಿಯರನ್ನು ವಂಚಿಸಿದ್ದ 28ರ ವ್ಯ್ಕ್ತಿಯೊಬ್ಬನನ್ನು ಬೆಂಗಳೂರಿನ ಈಶಾನ್ಯ ವಲಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಹಾಸನ ಮೂಲದ ಸಾದತ್ ಖಾನ್ ಎಂದು ತಿಳಿದುಬಂದಿದೆ. ಈತ ಖಾಸಗಿ ರೆಸಾರ್ಟ್ ವೊಂದರಲ್ಲಿ ಟೆಲಿಕಾಲರ್ ಆಗಿದ್ದು, ಅಲ್ಲಿಗೆ ಬಂದ ಮಹಿಳೆಯರ ಸ್ನೇಹ ಸಂಪಾದಿಸಿ ವಂಚಿಸುತ್ತಿದ್ದ. ಮೊದಲು ಅವರೊಂದಿಗೆ ಲೈಂಗಿಕ ಸಂಪರ್ಕಮಾಡಿ ಬಳಿಕ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುವುದನ್ನೇ ಈತ ಕಾಯಕವಾಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
17 ವಿವಿಧ ಹೆಸರುಗಳಲ್ಲಿ ಇಂಟರ್ನೆಟ್‌ನಲ್ಲೂ ಹಲವು ಮಹಿಳೆಯರೊಂದಿಗೆ ಸಂಪರ್ಕ ಸಾಧಿಸಿ ಹಣಕಾಸು ವಂಚನೆ ಮಾಡಿದ್ದಾನೆ. ಸರ್ಕಾರಿ ನೌಕರಿ ಹೊಂದಿದ್ದವರು, ಟೆಕ್ಕಿಗಳು ಮತ್ತು ಕಾರ್ಪೋರೇಟ್ ವಲಯದ ಮಹಿಳೆಯರಿಗೆ ಈತ ಹೆಚ್ಚಾಗಿ ಬಲೆ ಬೀಸುತ್ತಿದ್ದ ಎನ್ನಲಾಗಿದೆ. ಈತನಿಂದ ವಂಚನೆಗೊಳಾಗದವರು ಧೈರ್ಯವಾಗಿ ಬಂದು ದೂರು ನೀಡಿ ಎಂದು ಡಿಸಿಪಿ ಡಾ.ಹರ್ಷಾ ಮನವಿ ಮಾಡಿದ್ದಾರೆ.