Select Your Language

Notifications

webdunia
webdunia
webdunia
webdunia

ಪುತ್ರಿಯನ್ನು ಒತ್ತೆಯಾಳಾಗಿರಿಸಿ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಕಾಮುಕರು

ಉತ್ತರಪ್ರದೇಶ
ಸಂಭಾಲ್(ಉತ್ತರಪ್ರದೇಶ) , ಮಂಗಳವಾರ, 27 ಜೂನ್ 2017 (14:57 IST)
ಬರೇಲಿ ರೈಲ್ವೆ ನಿಲ್ದಾಣದಿಂದ ಮಹಿಳೆಯನ್ನು ಅಪಹರಿಸಿದ ಇಬ್ಬರು ಕಾಮುಕರು ನಾಲ್ಕು ದಿನಗಳ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಗಿನ್ನೌರ್ ಪ್ರದೇಶದಲ್ಲಿ ನಡೆದಿದೆ.
 
ಕಳೆದ ಜೂನ್ 16 ರಂದು 11 ವರ್ಷ ವಯಸ್ಸಿನ ಪುತ್ರಿ ಮತ್ತು 13 ವರ್ಷದ ಪುತ್ರನೊಂದಿಗೆ ಪಾನಿಪತ್‌ಗೆ ತೆರಳುತ್ತಿರುವ ಸಂದರ್ಭದಲ್ಲಿ ಮೂವರು ಆರೋಪಿಗಳು ಪ್ರಜ್ಞೆ ತಪ್ಪಿಸುವ ಔಷಧಿ ನೀಡಿ ಅಪಹರಿಸಿದ್ದರು ಎಂದು ಮಹಿಳೆ ಮಾಹಿತಿ ನೀಡಿರುವುದಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಪಾಂಡೆ ತಿಳಿಸಿದ್ದಾರೆ. 
 
ಆರೋಪಿಗಳು ಗಿನ್ನೌರ್ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪುತ್ರಿಯನ್ನು ಒತ್ತೆಯಾಳಾಗಿರಿಸಿಕೊಂಡು ನಾಲ್ಕು ದಿನಗಳ ಕಾಲ ಗ್ಯಾಂಗ್‌ರೇಪ್ ಎಸಗಿದ್ದಾರೆ. ಪುತ್ರನೊಂದಿಗೆ ನಾನು ಆರೋಪಿಗಳಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದೇನೆ. ಆದರೆ, ನನ್ನ ಮಗಳು ಇನ್ನೂ ಅದೇ ಗ್ರಾಮದಲ್ಲಿದ್ದಾಳೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
 
ಚಾಂದೌಸಿ ಠಾಣೆಯ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಗ್ಯಾಂಗ್‌ರೇಪ್ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್ ಛಾಬಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯಾರಿಗೆ ಗೃಹ ಸಚಿವ ಸ್ಥಾನ..? ಕೇಳಿಬರುತ್ತಿದೆ ಎರಡು ಹೆಸರು..!