Select Your Language

Notifications

webdunia
webdunia
webdunia
webdunia

ಮಹಿಳೆ ಸ್ನಾನ ಮಾಡುತ್ತಿದ್ದ ಚಿತ್ರೀಕರಣ: ಆರೋಪಿ ಬಂಧನ

ಮಹಿಳೆ ಸ್ನಾನ ಮಾಡುತ್ತಿದ್ದ ಚಿತ್ರೀಕರಣ: ಆರೋಪಿ ಬಂಧನ
ಮೈಸೂರು , ಬುಧವಾರ, 1 ಜೂನ್ 2016 (10:54 IST)
ಸ್ನಾನದ ಕೊಠಡಿಯಲ್ಲಿ ಮೊಬೈಲ್ ಅಡಗಿಸಿಟ್ಟು ಚಿತ್ರೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ದೇವನಾಯ್ಕನನ್ನು ಮೈಸೂರಿನ ಬೋಗಾದಿಯಲ್ಲಿ ಬಂಧಿಸಿದ್ದಾರೆ.
 
ಮಹಿಳೆಯ ಪಕ್ಕದ ಮನೆಯಲ್ಲಿ ಆರೋಪಿ ದೇವನಾಯ್ಕ (35) ವಾಸವಿದ್ದು, ಎರಡು ಕಟ್ಟಡಗಳಿಗೂ ಹೊಂದಿಕೊಂಡಿರುವ ಹಾಗೇ ಮೇಲ್ಚಾವಣಿ ಇದೆ. ಆರೋಪಿ ದೇವನಾಯ್ಕ, ಮೇಲ್ಚಾವಣಿ ಮೂಲಕ ಮಹಿಳೆಯ ಬೆಡ್ ರೂಮ್‌ಗೆ ಮೊಬೈಲ್‌ ಇರಿಸಿದ್ದು, ರಹಸ್ಯವಾಗಿ ಮಹಿಳೆ ಸ್ನಾನದ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿದ್ದ ಎನ್ನಲಾಗಿದೆ.
 
ಆರೋಪಿ ದೇವನಾಯ್ಕನನ್ನು ವಶಕ್ಕೆ ಪಡೆದ ಪೊಲೀಸರು ಘಟನೆ ಕುರಿತಂತೆ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಸರಸ್ವತಿಪುರಂ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 



ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ನಂಬಲಸಾಧ್ಯ: ಮಗುವಿನ ಹೃದಯ ಛಿದ್ರ ಮಾಡಿದ ತಾಯಿ