Select Your Language

Notifications

webdunia
webdunia
webdunia
webdunia

ನಂಬಲಸಾಧ್ಯ: ಮಗುವಿನ ಹೃದಯ ಛಿದ್ರ ಮಾಡಿದ ತಾಯಿ

Unbelievable
ನ್ಯೂಯಾರ್ಕ್ , ಬುಧವಾರ, 1 ಜೂನ್ 2016 (10:17 IST)
ಇತ್ತೀಚಿಗೆ ಪೋಷಕರೇ ತಮ್ಮ ಪುಟ್ಟ ಮಕ್ಕಳ ಜತೆ ಕ್ರೂರವಾಗಿ ವರ್ತಿಸುತ್ತಿರುವ ಘಟನೆಗಳು ಪದೇ ಪದೇ ವರದಿಯಾಗುತ್ತಿವೆ. ಶಿಕ್ಷೆ ನೀಡಲು ಜಪಾನ್‌ನಲ್ಲಿ ಪೋಷಕರಿಬ್ಬರು 7 ವರ್ಷದ ಮಗನನ್ನು ಘೋರ ಕಾಡಿನಲ್ಲಿ ಬಿಟ್ಟು ಹೋದ ಪ್ರಕರಣದ ಬೆನ್ನ ಹಿಂದೆಯೇ ಅದಕ್ಕಿಂತ ಕ್ರೂರ ಘಟನೆಯೊಂದು ವರದಿಯಾಗಿದೆ. 

ಸಲಿಂಗಕಾಮಿ ಸಂಗಾತಿ ಜತೆ ಸೇರಿ ತಾಯಿಯೋರ್ವಳು ತನ್ನ ಎರಡು ವರ್ಷದ ಮಗುವಿನ ಹೃದಯವನ್ನು ಛಿದ್ರ ಮಾಡಿ ಕೊಲೆಗೈದ ಕರಾಳ ಘಟನೆ ನ್ಯೂಯಾರ್ಕ್‌ನ ಲಿವಿಂಗ್‌ಸ್ಟನ್‌ನಲ್ಲಿ ನಡೆದಿದ್ದು, ಇದೀಗ ಅವರ ಅಪರಾಧ ಸಾಬೀತಾಗಿದೆ. 
 
ಪುಟ್ಟ ಬಾಲಕ ಲಿಯಾನ್ ಫೀ ದೇಹ ತನ್ನ ಮನೆ ಹೊರಭಾಗದಲ್ಲಿ ಮೃತ ಸ್ಥಿತಿಯಲ್ಲಿ ಕಂಡು ಬಂದಿತ್ತು. ಮಗುವನ್ನು ಕೊಂದ ಆರೋಪದ ಮೇಲೆ ಆತನ ತಾಯಿ ರಾಚೆಲ್ ಫೀ (31) ಮತ್ತು ಆಕೆಯ ಸಲಿಂಗಕಾಮಿ ಸಂಗಾತಿ ನ್ಯೋಮಿ ಫೀ (29)ಯನ್ನು ಬಂಧಿಸಲಾಗಿತ್ತು. ಆದರೆ ಅವರಿಬ್ಬರು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದರು. ಎರಡು ವರ್ಷಗಳ ಕಾಲ ದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಮಗುವಿನ ಸಾವಿಗೆ ಆತನ ತಾಯಿ ಮತ್ತು ಆಕೆಯ ಸಂಗಾತಿಯೇ ಕಾರಣ ಎಂದು ತೀರ್ಪು ನೀಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಮೇಲೆ ಮಗಳಿಗೆ ಕಿರುಕುಳ ಆರೋಪ