Publish Date: Sat, 29 Aug 2020 (10:25 IST)
Updated Date: Sat, 29 Aug 2020 (10:29 IST)
ಬೆಂಗಳೂರು: ನಗರದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸರಬರಾಜು ಜೋರಾಗಿಯೇ ನಡೆಯುತ್ತಿದೆ. ಇದೀಗ ಕೊರಿಯರ್ ಮೂಲಕ ಗಾಂಜಾ ಹಂಚುತ್ತಿದ್ದ ಅರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಶಿವಾಜಿನಗರದ ಧೀರಜ್ ಕಪೂರ್ ಎಂಬಾತ ಆರೋಪಿ. ಈತ ಖಾಸಗಿ ಶಾಲೆಯಲ್ಲಿ ಓದುತ್ತಿರುವ 14 ವರ್ಷದ ಹುಡುಗನ ವಿಳಾಸಕ್ಕೆ ಪಾರ್ಸೆಲ್ ಮೂಲಕ ಗಾಂಜಾ ಕಳುಹಿಸಿದ್ದ. ಈ ಸಂಬಂಧ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಆ ಮಾಹಿತಿಯನ್ವಯ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.