Select Your Language

Notifications

webdunia
webdunia
webdunia
webdunia

ಕನ್ನಡದಲ್ಲಿ ಮಾತನಾಡಿದ್ದಕ್ಕೆ ಟಿಕೆಟ್ ರದ್ದುಗೊಳಿಸಿದ ಗೋಏರ್‌ ಸಂಸ್ಥೆ

ಕನ್ನಡದಲ್ಲಿ ಮಾತನಾಡಿದ್ದಕ್ಕೆ ಟಿಕೆಟ್ ರದ್ದುಗೊಳಿಸಿದ ಗೋಏರ್‌ ಸಂಸ್ಥೆ
ಬೆಂಗಳೂರು , ಶನಿವಾರ, 30 ಸೆಪ್ಟಂಬರ್ 2017 (17:48 IST)
ಕನ್ನಡ ಭಾಷೆಯಲ್ಲಿ ಮಾತನಾಡಿದ್ದಕ್ಕಾಗಿ  ಗೋಏರ್‌ ವಿಮಾನಯಾನ ಸಂಸ್ಥೆ ಪ್ರಯಾಣದ ಟಿಕೆಟ್ ನಿರಾಕರಿಸಿದ ಹೇಯ ಘಟನೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವರದಿಯಾಗಿದೆ.
ಬಾಲಾಜಿ ನಾರಾಯಣ ಮೂರ್ತಿ, 14 ಜನ ಪ್ರಯಾಣಿಕರೊಂದಿಗೆ ಗೋಏರ್‌ ಚೆಕ್- ಕೌಂಟರ್‌ಗೆ ಆಗಮಿಸಿ 5.45 ಕ್ಕೆ ಮುಂಬೈಗೆ ತೆರಳಲು ಆಗಮಿಸಿದ್ದರು. ರಾತ್ರಿ ಮಳೆಯು ಕಾರಣದಿಂದಾಗಿ ನಾವು ವಿಮಾನನಿಲ್ದಾಣಕ್ಕೆ ಐದು ನಿಮಿಷ ತಡವಾಗಿ ಬಂದಿದ್ದೇವೆ. ಮುಂದಿನ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಕೊಡಿ ಎಂದು ಗೋಏರ್‌ ಸಿಬ್ಬಂದಿಗೆ ಕೋರಿದ್ದಾಗಿ ತಿಳಿಸಿದ್ದಾರೆ.
 
ಅರ್ಧ ಘಂಟೆಯ ನಂತರವೂ ಸಿಬ್ಬಂದಿ ಬಾರದಿರುವ ಕಾರಣ, 14 ಪ್ರಯಾಣಿಕರು ಮ್ಯಾನೇಜರ್‌ನೊಂದಿಗೆ ಮಾತನಾಡಲು ನಿರ್ಧರಿಸಿದರು, ಮ್ಯಾನೇಜರ್ ಪರ್ಯಾಯ ಟಿಕೆಟ್‌ಗಳನ್ನು ನೀಡುವುದನ್ನು ಖಾತ್ರಿಪಡಿಸಿದರು. "ನಾವು ಮ್ಯಾನೇಜರ್ ಕೌಂಟರ್‌ನಲ್ಲಿರುವಾಗ, ನಾನು ಇನ್ನೊಬ್ಬ ಪ್ರಯಾಣಿಕನೊಂದಿಗೆ ಕನ್ನಡದಲ್ಲಿ ಮಾತನಾಡುತ್ತಿದ್ದೆ. ವಿಮಾನ ನಿಲ್ದಾಣದಲ್ಲಿ ನಾನು ಕನ್ನಡದಲ್ಲಿ ಮಾತನಾಡಬಾರದೆಂದು ಗೋಯಿರ್ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
 
ಸಂದೀಪ್ ಎಂಬ ಗೋಏರ್ ವಿಮಾನ ಸಂಸ್ಥೆಯ ಉದ್ಯೋಗಿ ನಂತರ 13 ಜನ ಪ್ರಯಾಣಿಕರಿಗೆ ಟಿಕೆಟ್ ನೀಡಿದರು. ಆದರೆ ನನಗೆ ಮಾತ್ರ ಟಿಕೆಟ್ ನೀಡಲಿಲ್ಲ ಎಂದು ಆರೋಪಿಸಿದರು.
 
ನಾನು ಟಿಕೆಟ್ ಕೇಳಿದಾಗ ನೀವು ಕನ್ನಡ ಭಾಷೆಯಲ್ಲಿ ಮಾತನಾಡುತ್ತಿರುವುದರಿಂದ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ನಾನು ಪದೇ ಪದೇ ಟಿಕೆಟ್ ನೀಡಲು ಒತ್ತಾಯಿಸಿದಾಗಲೂ ಕೂಡಾ ಅವರು ಒಪ್ಪಲಿಲ್ಲ. ಕೊನೆಗೆ ನನ್ನ ಟಿಕೆಟ್ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಹಣ ಕೊಡಲು ನಿರಾಕರಿಸಿದರು. ಹಣ ಕೊಡುವುದಿಲ್ಲ ಎಂದು ಲಿಖಿತವಾಗಿ ಬರೆದುಕೊಡುವಂತೆ ಒತ್ತಾಯಿಸಿದೆ ಆದರೆ, ನನ್ನ ಮನವಿಗೆ ಸಂದೀಪ್ ಸ್ಪಂದಿಸಲಿಲ್ಲ ಎಂದು ತಿಳಿಸಿದ್ದಾರೆ.
 
ನಂತರ ನಾನು 9 ಸಾವಿರ ರೂಪಾಯಿ ಪಾವತಿಸಿ ಮುಂಬೈಗೆ ತೆರಳುವ ಮತ್ತೊಂದು ವಿಮಾನದ ಟಿಕೆಟ್ ಖರೀದಿಸಿದೆ. ಗೋಏರ್ ವಿಮಾನಯಾನ ಸಂಸ್ಥೆಯ ಕಸ್ಟಮರ್ ಕೇರ್‌ಗೆ ಮೇಲ್ ರವಾನಿಸಿದೆ. ಆದರೆ, ಇಲ್ಲಿಯವರೆಗೂ ಉತ್ತರ ಬರಲಿಲ್ಲ ಎಂದರು.
 
ಕನ್ನಡ ಅಭಿವೃದ್ಧಿ ಪ್ರಾಧೀಕಾರದ ಮುಖ್ಯಸ್ಥರಾದ ಎಸ್.ಜಿ.ಸಿದ್ದರಾಮಯ್ಯ, ಗೋಏರ್‌ ವಿಮಾನಯಾನ ಸಂಸ್ಥೆಗೆ ಪತ್ರ ಬರೆದಿದ್ದು ಆಕ್ಟೋಬರ್ 10 ರೊಳಗೆ ಉತತ್ರ ಬಾರದಿದ್ದಲ್ಲಿ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ ಎಂದು ಬಾಲಾಜಿ ನಾರಾಯಣ ಮೂರ್ತಿ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬುಲೆಟ್ ರೈಲು ಯೋಜನೆ ನೋಟು ನಿಷೇಧದಂತೆ ವಿನಾಶಕಾರಿ: ಚಿದಂಬರಂ