Select Your Language

Notifications

webdunia
webdunia
webdunia
webdunia

ಬುಲೆಟ್ ರೈಲು ಯೋಜನೆ ನೋಟು ನಿಷೇಧದಂತೆ ವಿನಾಶಕಾರಿ: ಚಿದಂಬರಂ

ಬುಲೆಟ್ ರೈಲು ಯೋಜನೆ ನೋಟು ನಿಷೇಧದಂತೆ ವಿನಾಶಕಾರಿ: ಚಿದಂಬರಂ
ನವದೆಹಲಿ , ಶನಿವಾರ, 30 ಸೆಪ್ಟಂಬರ್ 2017 (17:16 IST)
ಕೇಂದ್ರ ಸರಕಾರದ ಬುಲೆಟ್ ರೈಲು ಯೋಜನೆ ಕೂಡಾ ನೋಟು ನಿಷೇಧದಂತಹ ನಡೆಯಾಗಿದ್ದು ಸರ್ವನಾಶ ಮಾಡಲಿದೆ. ಬುಲೆಟ್ ರೈಲು ಯೋಜನೆ ಕೈ ಬಿಟ್ಟು  ರೈಲು ಸುರಕ್ಷತೆಗೆ ಹೆಚ್ಚಿನ ಹಣ ವ್ಯಯ ಮಾಡುವುದು ಸೂಕ್ತ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪರೇಲ್ ಮತ್ತು ಎಲ್ಫಿನ್‌ಸ್ಟೋನ್ ರೈಲ್ವೆ ನಿಲ್ದಾಣಗಳಲ್ಲಿ ನಡೆದ ಕಾಲ್ತುಳಿತದಲ್ಲಿ 23 ಜನರು ಸಾವನ್ನಪ್ಪಿದ ಘಟನೆ ನಂತರ ಚಿದಂಬರಂ ಹೇಳಿಕೆ ಹೊರಬಿದ್ದಿದೆ.
 
ಮುಂಬೈ ಮತ್ತು ಅಹ್ಮದಾಬಾದ್‌ ನಗರಗಳನ್ನು ಸಂಪರ್ಕಿಸುವ ಬುಲೆಟ್ ರೈಲು ಯೋಜನೆ ಸಾಮಾನ್ಯ ಜನರಿಗೆ ಅಲ್ಲ, ಆದರೆ "ಉನ್ನತ ಮತ್ತು ಪ್ರಬಲರ ಪ್ರತಿಷ್ಠೆಯ ಪ್ರವಾಸವಾಗಿದೆ ಎಂದು ಆರೋಪಿಸಿದ್ದಾರೆ.
 
ಕೇಂದ್ರದ ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ಬುಲೆಟ್ ರೈಲಿಗೆ ಮೀಸಲಾಗಿಟ್ಟ ಒಂದು ಲಕ್ಷ ಕೋಟಿ ಹಣವನ್ನು ರೈಲ್ವೆ ಸುರಕ್ಷತೆಗಾಗಿ ಬಳಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. 
 
"ಬುಲೆಟ್ ಟ್ರೈನ್ ಯೋಜನೆ ನೋಟು ನಿಷೇಧದಂತೆ. ಅದು ಸುರಕ್ಷತೆ ಸೇರಿದಂತೆ ಎಲ್ಲವನ್ನೂ ಕೊಲ್ಲುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ಸೇರಿದಂತೆ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ