ಸಿದ್ದರಾಮಯ್ಯರ ನಾನೇ ಮುಂದಿನ ಸಿಎಂ ಹೇಳಿಕೆ ತಪ್ಪಲ್ಲ: ಖರ್ಗೆ

Webdunia
ಶುಕ್ರವಾರ, 29 ಸೆಪ್ಟಂಬರ್ 2017 (14:01 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೇ ಮುಂದಿನ ಸಿಎಂ ಎಂದು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಸಿಎಂ ಸಿದ್ದರಾಮಯ್ಯನವರೇ ನಮ್ಮ ಕ್ಯಾಪ್ಟನ್. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ತಿಳಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಜನಪರ ಅಡಳಿತ ನೀಡುತ್ತಿರುವುದರಿಂದ ಮುಂದೆಯೂ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ. ಹಾಗೇ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.
 
ಚುನಾವಣೆಗೆ ಕೆಲವೇ ಕೆಲ ತಿಂಗಳುಗಳಿರುವಾಗ ಸರಕಾರದ ವಿರುದ್ಧ ಟೀಕೆ ಟಿಪ್ಪಣಿಗಳನ್ನು ನೀಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.    
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್‌ಎಸ್‌ಎಸ್‌ ಸಂವಿಧಾನಕ್ಕಿಂತ, ಕಾನೂನಿಗಿಂತ ದೊಡ್ಡರವಲ್ಲ: ಮತ್ತೇ ಕುಟುಕಿದ ಪ್ರಿಯಾಂಕ್ ಖರ್ಗೆ

ತೇಜಸ್ವಿ ಸಿಎಂ ಆಗಲು, ರಾಹುಲ್‌ ಪ್ರಧಾನಿಯಾಗಲು ಮತದಾರರಿಗೆ ವಿಶೇಷ ಮನವಿಯಿಟ್ಟ ಡಿಕೆ ಶಿವಕುಮಾರ್

ಚಿಕನ್ ಫ್ರೈಗಾಗಿ ಯುದ್ಧಭೂಮಿಯಂತಾದ ಮದುವೆ ಮಂಟಪ, ಅಂಥಾದೇನಾಯಿತು ಗೊತ್ತಾ

ಮೋದಿ, ನಿತೇಶ್ ಜೋಡಿ ಬಿಹಾರವನ್ನು ಜಂಗಲ್ ರಾಜ್‌ನಿಂದ ಮುಕ್ತಗೊಳಿಸಿದರು: ಅಮಿತ್ ಶಾ

ಮುಂದಿನ ಸುದ್ದಿ
Show comments