Publish Date: Fri, 30 Aug 2019 (19:42 IST)
Updated Date: Fri, 30 Aug 2019 (19:46 IST)
ಯುವಕನೋರ್ವ ಹೋಟೆಲ್ ರೂಮ್ ನಲ್ಲಿ ಸೆಲ್ಫೀ ವಿಡಿಯೋ ಮಾಡಿ ನೇಣಿಗೆ ಶರಣಾಗಿರುವಂತಹ ಘಟನೆ ನಡೆದಿದೆ.
ಬೆಂಗಳೂರು ಹೊರವಲಯ ಹೊಸಕೋಟೆಯ ಶ್ರೀನಿವಾಸ ಲಾಡ್ಜ್ ನಲ್ಲಿ ಘಟನೆ ನಡೆದಿದೆ. ಮೃತ ಯುವಕ ಹೊಸಕೋಟೆಯ ಕಂಬ್ಳಿಪುರದ ನಿವಾಸಿ ಕಿರಣ್ (22) ಎಂದು ತಿಳಿದು ಬಂದಿದೆ. ಹೊಸಕೋಟೆ ಪೋಲಿಸ್ ಠಾಣೆಯ ಪಕ್ಕದಲ್ಲಿರುವ ಶ್ರೀನಿವಾಸ ಲಾಡ್ಜ್ ನಲ್ಲಿ ರೂಮ್ ಮಾಡಿದ್ದ ಎಂದು ತಿಳಿದು ಬಂದಿದೆ. ರಾತ್ರಿ ಮೃತ ಕಿರಣ್ ಸೇಲ್ಫಿ ವಿಡಿಯೋ ಮಾಡಿ ನನ್ನ ಸಾವಿಗೆ ನಾನೇ ಕಾರಣ.
ನಮ್ಮ ತಾಯಿಗೆ ನಾನೊಬ್ಬನೆ ಮಗ. ಎಲ್ಲರೂ ನನ್ನ ತಾಯಿಯನ್ನ ಅಮ್ಮ ಎಂದು ಕರೆಯಿರಿ ಎಂದು ವಿಡಿಯೋ ಮಾಡಿದ ಬಳಿಕ ಹೋಟೆಲ್ ರೂಮ್ ನಲ್ಲಿರೋ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಮೇಲ್ನೋಟಕ್ಕೆ ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ ಇರಬಹುದು ಎಂದು ತಿಳಿದು ಬರುತ್ತಿದೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.