Webdunia - Bharat's app for daily news and videos

Install App

ಮಹಾತ್ಮ ಗಾಂಧಿಯವರ ತ್ಯಾಗ, ಲಾಲ್ ಬಹದ್ದೂರ್ ಶಾಸ್ತ್ರಿಯವರ ದೃಢ ನಿರ್ಧಾರ ನಮಗೆಲ್ಲ ಸ್ಪೂರ್ತಿ

Webdunia
ಶನಿವಾರ, 2 ಅಕ್ಟೋಬರ್ 2021 (16:50 IST)
[16:11, 10/2/2021] Bng Edu Minister Pr Manjunath: ಎಂತಹ ಪರಿಸ್ಥಿತಿ ಎದುರಾದರೂ ತಮ್ಮ ವಿಚಾರಧಾರೆಗಳಿಂದ ಹಿಂದೆ ಸರಿಯದ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ದೇಶದ ಭದ್ರತೆ, ಹಿತಕ್ಕಾಗಿ ಕಠಿಣ ನಿರ್ಧಾರ ತೆಗೆದುಕೊಂಡ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಪ್ರತಿಯೊಬ್ಬರಿಗೂ ಸ್ಪೂರ್ತಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ಹೇಳಿದರು. 
 
ಬೆಂಗಳೂರಿನಲ್ಲಿ ಸರ್ವ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ‘ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ’ ಮತ್ತು ಶಿಕ್ಷಕರ ದಿನಾಚರಣೆ ವೇಳೆ ನೀಡಲಾಗುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಅಂತಿಮ ಸುತ್ತಿಗೆ ತಲುಪಿದ್ದ ‘ಶಿಕ್ಷಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಸಚಿವರು ಮಾತನಾಡಿದರು. 
 
‘ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕರು ವಿಜ್ಞಾನ, ದೇಶದ ಶ್ರೀಮಂತ ಇತಿಹಾಸ, ಪರಂಪರೆ ಜೊತೆಗೆ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಮೌಲ್ಯಗಳು ಇಲ್ಲದ ಬರೀ ಶಿಕ್ಷಣದಿಂದ ಉತ್ತಮ ಪ್ರಜೆಗಳನ್ನು ರೂಪಿಸಲು ಆಗುವುದಿಲ್ಲ. ವಿಜ್ಞಾನ-ತಂತ್ರಜ್ಞಾನದಲ್ಲಿ ಹೊಸ ಹೊಸ ಸಂಶೋಧನೆಗಳಿಂದ ಸದುಪಯೋಗದ ಜೊತೆಗೆ ದುರುಪಯೋಗ ಕೂಡ ಆಗುತ್ತಿದೆ. ಶಿಕ್ಷಣದ ಜೊತೆ ಜೊತೆಗೆ ಆದ್ಯಾತ್ಮಿಕತೆ, ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ವಿಜ್ಞಾನವನ್ನು ಮನು ಕುಲದ ಒಳಿತಿಗೆ ಬಳಸಿಕೊಳ್ಳುವಂತಾಗಬೇಕು’ ಎಂದು ನಾಗೇಶ್ ನುಡಿದರು. 
 
ಶಿಕ್ಷಣ ಮತ್ತು ಆದ್ಯಾತ್ಮಿಕತೆಯಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದಿರುವ ಮಹಾತ್ಮ ಗಾಂಧಿ ಅವರ ಮಾತುಗಳನ್ನು ಸಚಿವ ಬಿ.ಸಿ ನಾಗೇಶ್ ಉಲ್ಲೇಖಿಸಿದರು. 
 
‘ಭಾರತದ ಭೂಪ್ರದೇಶಗಳನ್ನು ಪಾಕಿಸ್ತಾನ ಅತಿಕ್ರಮಣ ಮಾಡಿದಾಗ, ಹಿಮ್ಮೆಟ್ಟಿಸಲು
ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಶೀಘ್ರದಲ್ಲೇ ಕಠಿಣ ನಿರ್ಧಾರ ತೆಗೆದುಕೊಂಡು ಕಾರ್ಯಾಚರಣೆಗೆ ಆದೇಶ ನೀಡಿದರು. ತಾಳ್ಮೆಯಿಂದಲೇ ಕಠಿಣ ಪರಿಸ್ಥಿತಿಯನ್ನು ಎದುರಿಸುವುದು ಶಾಸ್ತ್ರಿ ಅವರ ಗುಣವಾಗಿತ್ತು. ಅಂತಹ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು’ ಎಂದು ಸಚಿವ ನಾಗೇಶ್ ಹೇಳಿದರು. 
 
‘ದೇಶದಲ್ಲಿ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದೇವೆ. ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಎನ್ಇಪಿ ಜಾರಿಯಾಗಲು 10 ವರ್ಷಗಳು ಬೇಕು. ಯಾರಿಗೂ ಹೊರೆಯಾಗದ, ಸಾರ್ವತ್ರಿಕವಾಗಿ ಲಭ್ಯವಾಗುವ ಮಹಾತ್ಮ ಗಾಂಧಿಯವರ ಕನಸಿನ ಮೌಲ್ಯಾಧಾರಿತ ಶಿಕ್ಷಣವನ್ನು ಎನ್ಇಪಿ ಮೂಲಕ ಜಾರಿಗೊಳಿಸಲಾಗುತ್ತದೆ. ಸರ್ವೋದಯದ ಭಾರತವನ್ನು ನಿರ್ಮಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು’ ಎಂದು ಸಚಿವ ನಾಗೇಶ್ ಹೇಳಿದರು. 
 
‘ಮಕ್ಕಳಿಗೆ ಧೈರ್ಯ, ಆತ್ಮವಿಶ್ವಾಸ ತುಂಬಬೇಕು. ಸದ್ಗುಣಗಳನ್ನು ಕಲಿಸಬೇಕು. ಒಳ್ಳೆಯ ಚಾರಿತ್ರ್ಯ ಬೆಳೆಸುವುದು ಶಿಕ್ಷಣದ ಮುಖ್ಯ ಗುರಿಯಾಗಬೇಕು. ಅದಕ್ಕಾಗಿ ಚಾರಿತ್ರ್ಯವಂತ ಶಿಕ್ಷಕರು ಬೇಕು. ಪ್ರತಿಯೊಬ್ಬರು ತಮ್ಮ ಬಗ್ಗೆ ತಾವು ಅರಿವು ಹೊಂದಿರಬೇಕು. ಭಾಷೆ ಮತ್ತು ನೆಲದ ಬಗ್ಗೆ ಪ್ರೀತಿ ಹೊಂದಿರಬೇಕು. ದೇಶಾಭಿಮಾನ ಹೊಂದಿರಬೇಕು. ಇಲ್ಲದಿದ್ದರೆ ಶಿಕ್ಷಣ ಅಪೂರ್ಣವಾಗುತ್ತದೆ’ ಎಂದು ಮಹಾತ್ಮ ಗಾಂಧಿ ಅವರನ್ನು ಉಲ್ಲೇಖಿಸಿ ಶಿಕ್ಷಣ ತಜ್ಞ ಡಾ. ಗುರುರಾಜ್ ಕರಜಗಿ ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments