Publish Date: Fri, 30 Mar 2018 (09:27 IST)
Updated Date: Fri, 30 Mar 2018 (09:32 IST)
ಬೆಳಗಾವಿ: ಬೆಳಗಾವಿ ಗಡಿ ವಿಚಾರದಲ್ಲಿ ಮತ್ತೆ ಮಹಾರಾಷ್ಟ್ರ ಕ್ಯಾತೆ ತೆಗೆದಿದೆ. ಶಿವಸೇನೆ ಸಂಸದ ಸಂಜಯ್ ರಾವತ್ ಗಡಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕಿರಿಕ್ ಸೃಷ್ಟಿಸಿದ್ದಾರೆ.
ಕಾವೇರಿ, ಕಾಶ್ಮೀರ ಸಮಸ್ಯೆ ಮಾತುಕತೆ ಮೂಲಕ ಪರಿಹಾರ ಸಾಧ್ಯವಾಗಿಲ್ಲ. ಅದೇ ರೀತಿ ಈ ವಿವಾದವೂ ಬಗೆ ಹರಿಯಲ್ಲ. ಹೊಡೆದಾಟದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು. ನಮ್ಮ ನಾಯಕರೂ ಇದನ್ನೇ ಹೇಳಿದ್ದೇರೆ. ನೀವು ಗಡಿ ಮರಾಠಿಗರು ಯಾವಾಗ ಕರೆ ಕೊಟ್ಟರೂ ಹೋರಾಟಕ್ಕೆ ನಾವು ಸಿದ್ಧ ಎಂದು ಸಂಜಯ್ ರಾವತ್ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಅಷ್ಟೇ ಅಲ್ಲ, ಇಲ್ಲಿ ಒಂದು ಕಲ್ಲು ಹೊಡೆದರೆ ಅಲ್ಲಿ 100 ಕಲ್ಲು ಬೀಳುತ್ತದೆ. ಗಡಿ ಮರಾಠಿಗರ ಮೇಲೆ ನಿರಂತರವಾಗಿ ಅನ್ಯ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಚುನಾವಣಾ ನೀತಿ ಸಂಹಿತೆಗೆಲ್ಲಾ ನಾವು ಹೆದರೋಲ್ಲ. ಹೆಚ್ಚೆಂದರೆ ಒಂದು ಕೇಸು ದಾಖಲಾಗಬಹುದಷ್ಟೇ ಎಂದು ಸಂಜಯ್ ರಾವತ್ ಕಿರಿಕ್ ಸೃಷ್ಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ