Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರ, ತೆಲಂಗಾಣ ಗಡಿಯಲ್ಲಿ ಕಟ್ಟೆಚ್ಚರ!

ಮಹಾರಾಷ್ಟ್ರ, ತೆಲಂಗಾಣ ಗಡಿಯಲ್ಲಿ ಕಟ್ಟೆಚ್ಚರ!
ಬೀದರ್ , ಶನಿವಾರ, 25 ಡಿಸೆಂಬರ್ 2021 (09:52 IST)
ಬೀದರ್ : ಕೊರೊನಾ ಹೊಸ ರೂಪಾಂತರಿ  ವೈರಸ್ ಓಮೈಕ್ರಾನ್ ಪತ್ತೆ.

ಕೊರೊನಾ 3ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ತೆಲಂಗಾಣ ಭಾಗದಿಂದ ಬೀದರ್ ಜಿಲ್ಲೆಯ ವಾಹನಗಳ ಪ್ರವೇಶಕ್ಕೆ ಪ್ರತಿಯೊಂದು ವಾಹನವನ್ನು ತಪಾಸಣೆಗೊಳಿಸಲಾಗುತ್ತಿದೆ.

ವ್ಯಾಕ್ಸಿನೇಷನ್ ಪಡೆದವರಿಗೆ ಎಂಟ್ರಿ ಪಡೆಯದವರಿಗೆ ಬಂದ ದಾರಿ ಸುಂಕವಿಲ್ಲವೆಂದು ವಾಪಸ್ ಕಳುಹಿಸಲಾಗುತ್ತಿದೆ. ಬೀದರ್ ಜಿಲ್ಲಾಡಳಿತದಿಂದ ಗಡಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಓಮೈಕ್ರಾನ ಸೋಂಕು ವೇಗವಾಗಿ ಹರಡುತ್ತಿದೆ. ಅದರಲ್ಲೂ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಈ ಹಿನ್ನಲೆ ಈಗಾಗಲೇ ಸಭೆ ನಡೆಸಿರುವ ಪ್ರಧಾನಿಗಳು ರಾಜ್ಯಗಳಲ್ಲಿ ಕಟ್ಟೆಚ್ಚರವಹಿಸುವಂತೆ ಸೂಚಿಸಿದ್ದು, ಲಸಿಕೆಗೆ ವೇಗ ನೀಡುವಂತೆ ಹೇಳಿದ್ದಾರೆ.

ಮಹಾರಾಷ್ಟ್ರ ರಾಜ್ಯದಿಂದ ಬರುವಂತ ಪ್ರತಿಯೊಂದು ವಾಹನಗಳು ತಪಾಸಣೆ ಒಳಪಡಿಸಲಾಗುತ್ತದೆ. ಬೀದರ್ ಜಿಲ್ಲಾಡಳಿತ ದಿಂದ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಆದೇಶ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಓಮೈಕ್ರಾನ್: 6 ರಾಜ್ಯಗಳಲ್ಲಿ ಕರ್ಫ್ಯೂ!