Webdunia - Bharat's app for daily news and videos

Install App

ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ನಾಳೆ ಮಹಾಮಸ್ತಕಾಭಿಷೇಕ...!

Webdunia
ಶನಿವಾರ, 30 ಜುಲೈ 2022 (16:51 IST)
ಜಿಲ್ಲೆಯ ಗಡಿಗ್ರಾಮ ಚನ್ನಪಟ್ಟಣ ತಾಲೂಕಿನ ಗೌಡಗೆರೆಯ ಪ್ರಸಿದ್ದ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಜು. 31ರಂದು ಮಹಾಮಸ್ತಕಾಭಿಷೇಕ ಜರುಗಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಜಿ.ಬಿ.ಮಲ್ಲೇಶ್ ತಿಳಿಸಿದ್ದಾರೆ.
60 ಅಡಿ ಎತ್ತರದ ಸೌಮ್ಯ ಸ್ವಭಾವದ ಶ್ರೀ ಚಾಮುಂಡೇಶ್ವರಿ ಲೋಹದ ವಿಗ್ರಹ 2021ರ ಆಗಸ್ಟ್ 8ರಂದು ಉದ್ಘಾಟನೆಗೊಂಡಿತ್ತು.
 
ಜು.29ರಿಂದಲೇ ಲೋಕಕಲ್ಯಾಣಾರ್ಥ ಚಂಡಿಕಾಹೋಮ ಆಯೋಜನೆಗೊಂಡಿದ್ದು, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಭಾಗಿಯಾಗಲಿದ್ದಾರೆ. ಜು. 30ರಂದು ಚಾಮುಂಡೇಶ್ವರಿ ದೇವಿಗೆ ಹೂವು- ಹೊಂಬಾಳೆಯಿಂದ ಸಿಂಗರಿಸಿ ಮೆರವಣಿಗೆ ನಡೆಸಲಾಗುವುದು. ಜು. 31ರಂದು ಮಹಾಮಸ್ತಕಾಭಿಷೇಕ ನಡೆಯಲಿದ್ದು, ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸುವರು.
ಧಾರ್ಮಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಡಿ.ಕೆ.ಸುರೇಶ್, ಚಿತ್ರನಟರಾದ ಶಿವರಾಜ್‌ಕುಮಾರ್, ಸುದೀಪ್ ಆಗಮಿಸಲಿದ್ದಾರೆ ಎಂದು ವಿವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಅಸ್ಥಿ ಉತ್ಖನನ: ದೂರುದಾರ ಗುರುತಿಸಿದ 11ನೇ ಪಾಯಿಂಟ್‌ನಲ್ಲಿ ಬಿಗ್‌ಟ್ವಿಸ್ಟ್‌

ಮೈಸೂರಿನತ್ತ ಹೆಜ್ಜೆ ಹಾಕಿದ ಅಭಿಮನ್ಯ ನೇತೃತ್ವದ 9 ಗಜಪಡೆ

ರಾಜಮನೆತನದ ತ್ಯಾಗದ ಫಲವೇ ಕೆಆರ್‌ಎಸ್ ಡ್ಯಾಂ: ಮಹಾದೇವಪ್ಪ ಹೇಳಿಕೆಗೆ ಸುಬುಧೇಂದ್ರ ತೀರ್ಥ ಪ್ರತಿಕ್ರಿಯೆ

ಜಾರ್ಖಂಡ್‌ ಮಾಜಿ ಸಿಎಂ ಸಿಬು ಸೊರೇನ್ ನಿಧನ: ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಮಾಜಿ ಸಿಎಂ ಶಿಬು ಸೊರೆನ್ ನಿಧನ: ಮೂರು ದಿನಗಳ ಶೋಕಾಚರಣೆ ಘೋಷಿಸಿದ ಜಾರ್ಖಂಡ್‌ ಸರ್ಕಾರ

ಮುಂದಿನ ಸುದ್ದಿ
Show comments