Webdunia - Bharat's app for daily news and videos

Install App

ಮದ್ದೂರು: ತಮ್ಮನ ಹತ್ಯೆಗೆ ಸುಫಾರಿ ನೀಡಿ ಡೌಟ್ ಬರಬಾರದೆಂದು ಕುಂಭಮೇಳಕ್ಕೆ ತೆರಳಿದ್ದ ಅಣ್ಣ

Sampriya
ಶನಿವಾರ, 15 ಫೆಬ್ರವರಿ 2025 (18:53 IST)
ಮಂಡ್ಯ: ಮದ್ದೂರು ತಾಲ್ಲೂಕಿನ ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ನಡೆದ ಕೃಷ್ಣೇಗೌಡನ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ತಮ್ಮನನ್ನು ಕೊಲೆ ಮಾಡಲು ಸ್ವಂತ ಅಣ್ಣನೇ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ.

ಫೆ.11ರಂದು ನಡೆದಿದ್ದ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ 8 ಆರೋಪಿಗಳನ್ನು ಬಂಧಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.

ಬಂಧಿತ ಆರೋಪಿಗಳನ್ನು ಮೃತ ಕೃಷ್ಣೇಗೌಡನ ಅಣ್ಣನಾದ ಅರ್ಚಕ  ಶಿವನಂಜೇಗೌಡ (ಗುಡ್ಡಪ್ಪ), ಮಳವಳ್ಳಿ ತಾಲ್ಲೂಕು ನಿಟ್ಟೂರು ಗ್ರಾಮದ ಚಂದ್ರಶೇಖರ ಎನ್‌.ಎಸ್‌., ಆಟೊ ಚಾಲಕ ಸುನಿಲ್‌ ಬಿ.ಎನ್‌., ಮರದ ವ್ಯಾಪಾರಿ ಕೆ.ಪಿ.ಉಲ್ಲಾಸ್‌ಗೌಡ, ಆಬಲವಾಡಿ ಗ್ರಾಮದ ಕೂಲಿ ಕಾರ್ಮಿಕ ಪ್ರತಾಪ ಎ.ಎಂ., ಆಟೊ ಚಾಲಕ ಕೆ.ಎಂ.ಅಭಿಷೇಕ್‌, ಕಾರು ಚಾಲಕ ಕೆ.ಶ್ರೀನಿವಾಸ, ರಾಮನಗರ ಜಿಲ್ಲೆ ಜಕ್ಕೇಗೌಡನದೊಡ್ಡಿಯ ಎಚ್‌.ಹನುಮೇಗೌಡ ಬಂಧಿತ ಆರೋಪಿಗಳು.

ಹತ್ಯೆಯಾದ ಕೃಷ್ಣೇಗೌಡ ಮಾಡಿದ್ದ ಸಾಲವನ್ನು ಅಣ್ಣ ಶಿವನಂಜೇಗೌಡ ತೀರಿಸಿದ್ದ. ಇದರ ಸಲುವಾಗಿ ತನ್ನ ಜಮೀನನ್ನು ಶಿವನಂಜೇಗೌಡಗೆ ಪತ್ನಿ ಹೆಸರಿಗೆ ಬರೆದುಕೊಟ್ಟಿದ್ದ. ಆದರೆ ಆನಂತರ ಜಮೀನನ್ನು ಅವರ ವಶಕ್ಕೆ ಬಿಡದೆ ಕೃಷ್ಣೇಗೌಡ ಜಗಳ ತೆಗೆದಿದ್ದ. ತನ್ನ ಅಕ್ಕ ತಂಗಿಯರನ್ನು ಪುಸಲಾಯಿಸಿ ಶಿವನಂಜೇಗೌಡನ ವಿರುದ್ಧ ಜಮೀನು ವಿಚಾರದಲ್ಲಿ ಕೇಸು ಹಾಕಿಸಿದ್ದ. ಇದರಿಂದ ಮನನೊಂದ ಶಿವನಂಜೇಗೌಡ ತಮ್ಮನನ್ನು ಕೊಲೆ ಮಾಡಲು ₹5 ಲಕ್ಷಕ್ಕೆ ಸುಪಾರಿ ನೀಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಇನ್ನು ಕೊಲೆ ಪ್ರಕರಣದಲ್ಲಿ ತಾನೂ ಭಾಗಿಯಾಗಿರುವ ವಿಚಾರ ತಿಳಿಯಬಾರದೆಂದು ಸ್ನೇಹಿತರೊಂದಿಗೆ ಶಿವನಂಜೇಗೌಡ ಪ್ರಯಾಗ್‌ರಾಹ್‌ಗೆ ತೆರಳಿ ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದ. ಗ್ರಾಮಸ್ಥರು ನೀಡಿದ ಸುಳಿವಿನ ಮೇರೆಗೆ ಚಂದ್ರಶೇಖರ್‌ ಎನ್‌.ಎಸ್‌. ಎಂಬುವನನ್ನು ಮೊದಲು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇತರ ಆರೋಪಿಗಳ ಮಾಹಿತಿ ಹೊರಬಿದ್ದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments