Select Your Language

Notifications

webdunia
webdunia
webdunia
webdunia

MahakumbhMela: ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಯೋಗಿ ಆದಿತ್ಯನಾಥ

MahakumbhMela 2025, UP Chief Miniter Yogi Adithyanath,  MahakumbhMela Negative Comments

Sampriya

ಲಖನೌ , ಶುಕ್ರವಾರ, 14 ಫೆಬ್ರವರಿ 2025 (20:20 IST)
Photo Courtesy X
ಲಖನೌ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಬಗ್ಗೆ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮದಿಂದ ರಾಜ್ಯದ ಆರ್ಥಿಕತೆಗೆ ₹3 ಲಕ್ಷ ಕೋಟಿ ಆದಾಯ ಹರಿದುಬರಲಿದೆ ಎಂದು ತಿಳಿಸಿದರು.

ಮಹಾಕುಂಭ ಕೋಟ್ಯಂತರ ಜನರ ನಂಬಿಕೆಯ ಪ್ರತೀಕವಾಗಿದ್ದು, ಹಲವಾರು ವರ್ಷಗಳಿಂದಲೂ ಹತ್ತಿಕ್ಕಲಾಗಿತ್ತು ಎಂದು ತಿಳಿಸಿದರು.

ಮಹಾಕುಂಭ ಮೇಳಕ್ಕೆ ₹5 ಸಾವಿರದಿಂದ ₹6 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ ಎಂದು ಕೆಲವರು ಟೀಕೆ ಮಾಡಿದ್ದಾರೆ. ಕುಂಭಮೇಳದಿಂದ ₹3 ಕೋಟಿ ಆದಾಯವಾಗಿದ್ದು,  ಇದರಿಂದ ರಾಜ್ಯದ ಆರ್ಥಿಕತೆಗೆ ಭಾರೀ ಕೊಡುಗೆಯಾಗಿದೆ.

ಕುಂಭ ನಡೆಸಲು ಕೇವಲ ₹1500 ಕೋಟಿ ಖರ್ಚು ಮಾಡಲಾಗಿದೆ. ಉಳಿದ ಹಣವನ್ನು ಪ್ರಯಾಗರಾಜ್‌ನ ಪಟ್ಟಣದ ಮೂಲ ಸೌಕರ್ಯದ ಅಭಿವೃದ್ಧಿಗೆ ಬಳಸಲಾಗಿದೆ. ಇದರಿಂದ ದೇಶದ ಆರ್ಥಿಕತೆಗೂ ವರದಾನವಾಗಲಿ ಎಂದರು. ತ್ರಿವೇಣಿ ಸಂಗಮದಲ್ಲಿ ಇದುವರೆಗೆ ಸುಮಾರು 50 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಯೋಗಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಮತ್ತೇ ಕಿನ್ನರ ಅಖಾಡ ಸೇರಿದ ನಟಿ ಮಮತಾ ಕುಲಕರ್ಣಿ