ಮೈಸೂರು : ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಗೃಹ ಸಚಿವ ಎಂ.ಬಿ.ಪಾಟೀಲ್ ಹೋರಾಟದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಗೃಹ ಸಚಿವರಾಗಿರುವ ಕಾರಣ ನಾನಂತೂ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಕಾನೂನು ಹೋರಾಟ ನಡೆಸುವುದು, ಬಿಡುವುದು ಜಾಗತಿಕ ಲಿಂಗಾಯಿತ ಸಭಾಗೆ ಸೇರಿದ್ದು, ಈ ಸಂಬಂಧ ಅವರು ನಿರ್ಣಯ ಕೈಗೊಳ್ಳುತ್ತಾರೆ. ಅದರಲ್ಲಿ ನಾನು ಇರುವುದಿಲ್ಲ, ಬೌದ್ಧರಿಗೆ ಬೌದ್ಧ, ಜೈನರಿಗೆ ಜೈನ ಧರ್ಮ ಹೇಗೆ ಮುಖ್ಯವೋ, ಹಾಗೆಯೇ ನನಗೆ ಲಿಂಗಾಯತ ಧರ್ಮ ಮುಖ್ಯ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.