Select Your Language

Notifications

webdunia
webdunia
webdunia
webdunia

ಬಜೆಟ್‍ನಲ್ಲಿ ವಸತಿ ಇಲಾಖೆಗೆ ಕಡಿಮೆ ಅನುದಾನ; ಈ ಬಗ್ಗೆ ಬೇಸರಗೊಂಡ ವಸತಿ ಸಚಿವರಿಗೆ ಸಿಎಂ ಹೇಳಿದ್ದೇನು?

ಬಜೆಟ್‍ನಲ್ಲಿ ವಸತಿ ಇಲಾಖೆಗೆ ಕಡಿಮೆ ಅನುದಾನ; ಈ ಬಗ್ಗೆ ಬೇಸರಗೊಂಡ ವಸತಿ ಸಚಿವರಿಗೆ ಸಿಎಂ ಹೇಳಿದ್ದೇನು?
ರಾಮನಗರ , ಭಾನುವಾರ, 24 ಫೆಬ್ರವರಿ 2019 (09:59 IST)
ರಾಮನಗರ : ಈ ಬಾರಿಯ ಬಜೆಟ್‍ನಲ್ಲಿ ವಸತಿ ಇಲಾಖೆಗೆ ಅನುದಾನ ಕಡಿಮೆಯಾಗಿರುವುದ್ದಕ್ಕೆ ವಸತಿ ಸಚಿವ ಎಂಟಿಬಿ ನಾಗರಾಜ್ ಸಿಎಂ ಕುಮಾರಸ್ವಾಮಿ ಎದುರಲ್ಲೇ ಬೇಸರ ವ್ಯಕ್ತಪಡಿಸಿದ್ದಾರೆ.


ಚನ್ನಪಟ್ಟಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಸೇರಿ ಕೆಲವು ಸಚಿವರು ಹಾಗೂ ಸಿಎಂ ಕುಮಾರಸ್ವಾಮಿ ಅವರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್ , ಬಜೆಟ್‍ನಲ್ಲಿ ಸಿಕ್ಕಿರುವ ಅನುದಾನ ಕಡಿಮೆಯಾಗಿದೆ. ವಸತಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಸಿಎಂಗೆ ನಿರಂತರವಾಗಿ ಬಡವರ ಆರ್ಶೀವಾದ, ಮನೆ ನಿರ್ಮಿಸಿ ಕೊಟ್ಟರೆ ಸಿಗುತ್ತೆ’ ಎಂದು ಹೇಳಿದ್ದಾರೆ.


ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ ಅವರು,’ ಕ್ಯಾಬಿನೆಟ್‍ನಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು ಇಲ್ಲೇ ಪ್ರಸ್ತಾಪ ಮಾಡಿಬಿಟ್ಟರು. ನನ್ನ ಕಷ್ಟ ಅವರಿಗೇನೂ ಗೊತ್ತಿದೆ. ಸಚಿವ ಡಿಕೆ ಶಿವಕುಮಾರ್ ಅವರಿಗೆ ಈ ಬಗ್ಗೆ ಎಲ್ಲ ಗೊತ್ತಿದೆ. ನಾಗರಾಜ್ ಅವರು ಹೊಸದಾಗಿ ಮಂತ್ರಿಗಳಾಗಿದ್ದಾರೆ. ಆದ್ದರಿಂದ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಹಿಂದಿನ ಸರ್ಕಾರದಲ್ಲಿ ನಿಗದಿಯಾಗಿದ್ದ ಮನೆಗಳ ಪೂರ್ಣಗೊಳಿಸಲು ಕೂಡ ಹಣ ಬಿಡುಗಡೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅನುದಾನವನ್ನು ಹೆಚ್ಚಿಸಲಾಗುವುದು’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ