Webdunia - Bharat's app for daily news and videos

Install App

ಪ್ರಿಯಕರನೊಂದಿಗೆ ಲವ್ವಿ ಡವ್ವಿ! : ಪತಿ ಏನ್ ಮಾಡ್ದ ಗೊತ್ತ?

Webdunia
ಭಾನುವಾರ, 23 ಜನವರಿ 2022 (11:15 IST)
ಮಂಡ್ಯ : ಜಿಲ್ಲೆಯ ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲು ಗ್ರಾಮದಲ್ಲಿ 6 ವರ್ಷದ ಮಗುವನ್ನು ಕೊಂದು ವ್ಯಕ್ತಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ತಿರುವು ಸಿಕ್ಕಿದ್ದು, ಪತ್ನಿಯ ಅಕ್ರಮ ಸಂಬಂಧವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

 
ಜ.13 ರಂದು ಪಿಟ್ಟೆಕೊಪ್ಪಲು ಗ್ರಾಮದ ಗಂಗಾಧರ್ ತನ್ನ ಮಗ ಜಶ್ವಿತ್ (6) ಜೊತೆಗೆ ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತನ ಪತ್ನಿ ಸಿಂಧು, ನಂಜುಂಡೇಗೌಡ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ನಂಜುಂಡೇಗೌಡನಿಗೆ ಸಿಂಧು ಅಕ್ಕನ ಮಗಳಾಗಬೇಕು. ಈ ವಿಷಯವನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಗಂಗಾಧರ್ ಎಳೆ ಎಳೆಯಾಗಿ ತಿಳಿಸಿದ್ದಾನೆ.

ಗಂಗಾಧರ್ ವೀಡಿಯೋದಲ್ಲಿ ತನ್ನ ಹೆಂಡತಿ ಸಿಂಧುವಿನ ಅಕ್ರಮ ಸಂಬಂಧ ಹಾಗೂ ಆಕೆ ನೀಡುತ್ತಿದ್ದ ಕಿರುಕುಳವನ್ನು ಹೇಳಿಕೊಂಡಿದ್ದಾನೆ. 8 ವರ್ಷಗಳ ದಾಂಪತ್ಯ ಜೀವನದಲ್ಲಿ ಕಳೆದೆರಡು ವರ್ಷದಿಂದ ಬಿರುಕು ಮೂಡಿತ್ತು ಎಂದು ಗಂಗಾಧರ್ ಹೇಳಿದ್ದಾನೆ. ನಂಜುಂಡೇಗೌಡನ ಮೋಹಕ್ಕೆ ಬಿದ್ದು ಪತಿ, ಮಗು ಬಗೆಗಿನ ಕಾಳಜಿಯನ್ನು ಸಿಂಧು ಮರೆತಿದ್ದಳು. ಪ್ರತಿನಿತ್ಯ ನಂಜುಂಡೇಗೌಡನ ಜೊತೆ ಮಾತುಕತೆಯಲ್ಲೇ ಸಿಂಧು ತೊಡಗಿದ್ದಳು.

ಯಾರೂ ಇಲ್ಲದ ವೇಳೆ ಗಂಗಾಧರ್ ಮನೆಗೆ ನಂಜುಂಡೇಗೌಡ ಬಂದು ಸಿಂಧು ಜೊತೆ ಕಾಲ ಕಳೆದು ಹೋಗುತ್ತಿದ್ದ. ಸಿಂಧು ಸದಾ ಫೋನ್ನಲ್ಲಿ ಬ್ಯುಸಿಯಾಗಿ ಇರುತ್ತಿದ್ದಳು. ನಂಜುಂಡೇಗೌಡ ಜೊತೆ ಸಿಂಧು ವೀಡಿಯೋ ಕಾಲ್ ಮಾಡುತ್ತಿದ್ದಳು. ಇದನ್ನು ಕಂಡ ಪತಿ ಗಂಗಾಧರ್ ಪತ್ನಿ ಸಿಂಧು ವರ್ತನೆಯನ್ನು ಪ್ರಶ್ನಿಸಿದ ವೇಳೆ ಸಿಂಧು ಮತ್ತು ನಂಜುಂಡೇಗೌಡ ಬೆದರಿಕೆ ಹಾಕಿದ್ದರು.

ಆಸ್ತಿ ಭಾಗ ಮಾಡಿ, ಹೆಂಡತಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಠಾಣೆಗೆ ದೂರು ನೀಡುತ್ತೇವೆ. ಇಲ್ಲ ನಿನ್ನ ಮತ್ತು ಮಗನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು.

ಪತ್ನಿ ಹಾಗೂ ಪ್ರಿಯಕರನ ನಿರಂತರ ಕಿರುಕುಳಕ್ಕೆ ಬೇಸತ್ತು ಹಾಗೂ ಮರ್ಯಾದೆಗೆ ಅಂಜಿ 6 ವರ್ಷದ ಮಗನೊಂದಿಗೆ ಗಂಗಾಧರ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ. ಅಂದು ನಿದ್ರಾವಸ್ತೆಯಲ್ಲಿದ್ದ ತನ್ನ ಮಗನ ಮುಖಕ್ಕೆ ಬಟ್ಟೆ ಕಟ್ಟಿ ಗಂಗಾಧರ್ ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments