Publish Date: Sun, 06 Oct 2019 (19:19 IST)
Updated Date: Sun, 06 Oct 2019 (19:21 IST)
ಪ್ರೀತ್ಸೆ ಪ್ರೀತ್ಸೆ ಅಂತ ಬೆನ್ನು ಬಿದ್ದ ಯುವಕನೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಹುಡುಗಿಗೆ ಮಾಡಬಾರದ ಕೆಲಸ ಮಾಡಿದ್ದಾನೆ.
ಡಿಗ್ರಿ ಮೊದಲ ವರ್ಷ ಓದುತ್ತಿದ್ದ ಅರುಣಾ ಳನ್ನು ಆರೋಪಿ ರಂಗಸ್ವಾಮಿ ಪ್ರೀತಿ ಮಾಡುತ್ತಿದ್ದನು.
ಆದರೆ ರಂಗಸ್ವಾಮಿಯ ಪ್ರೀತಿಯನ್ನು ಅರುಣಾ ಒಪ್ಪಿಕೊಂಡಿರಲಿಲ್ಲ. ಯಾವಾಗ ತನ್ನ ಪ್ರಪೋಸ್ ಗೆ ಹುಡುಗಿ ಒಪ್ಪಿಕೊಳ್ಳಲಿಲ್ಲವೋ ಅದರಿಂದ ಸಿಟ್ಟಾದ ಆರೋಪಿ ಆಕೆಯ ಕತ್ತು ಹಿಸುಕಿದ್ದಾನೆ.
ಅಲ್ಲೇ ಇದ್ದ ಒಳಚರಂಡಿಯಲ್ಲಿ ಅವಳನ್ನು ಎಸೆದು ಹೋಗಿದ್ದಾನೆ. ಹುಡುಗಿಯ ಶವ ಪತ್ತೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಅಂದ್ಹಾಗೆ ಆಂಧ್ರದ ಅನಂತಪುರಂನಲ್ಲಿ ಈ ಘಟನೆ ನಡೆದಿದೆ.