Select Your Language

Notifications

webdunia
webdunia
webdunia
webdunia

ಮತಾಂತರ ನಿಷೇಧ ಕಾಯ್ದೆ ಬಳಿಕ ಲವ್ ಜಿಹಾದ್ ನಿಷೇಧ ಕಾಯ್ದೆ: ಸುನಿಲ್ ಕುಮಾರ್

Love Jihad Prohibition Ac
belagavi , ಮಂಗಳವಾರ, 14 ಡಿಸೆಂಬರ್ 2021 (20:35 IST)
ಮತಾಂತರ ನಿಷೇಧ ಕಾಯ್ದೆ ನಂತರ ಲವ್ ಜಿಹಾದ್ ವಿರುದ್ಧ ಕಾಯ್ದೆಯನ್ನು ತರುತ್ತೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಮೊದಲಿನಿಂದಲೂ ಗೋಹತ್ಯೆ ನಿಷೇಧ ಕಾಯ್ದೆ ತರುವುದಾಗಿ ಹೇಳಿತ್ತು. ಅದರಂತೆ ಅದನ್ನು ಜಾರಿಗೆ ತಂದೆವು. ಈಗ ಮತಾಂತರ ನಿಷೇಧ ಕಾಯ್ದೆಯನ್ನು ಈ ಅಧಿವೇಶನದಲ್ಲಿ ಜಾರಿಗೆ ತರುತ್ತೇವೆ ಎಂದರು.
ಮತಾಂತರವನ್ನು ಮಹಾತ್ಮ ಗಾಂಧಿ, ವಿವೇಕಾನಂದರು ಕೂಡಾ ವಿರೋಧಿಸಿದ್ದರು. ಈಗ ಈ ಕಾಯ್ದೆಗೆ ಕಾನೂನಿನ ಸ್ವರೂಪ ತರುತ್ತಿದ್ದೇವೆ. ಈ ವಿಚಾರದಲ್ಲಿ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಕಾಂಗ್ರೆಸ್ ಯಾಕೆ ವಿರೋಧ ಮಾಡುತ್ತಿದೆ ಎಂಬುದನ್ನು ಹೇಳಲಿ ಎಂದು ಒತ್ತಾಯಿಸಿದರು.
ಯಾವ ಯಾವ ಕಾರಣಕ್ಕೆ ಮತಾಂತರ ಆಗುತ್ತಿದೆ. ಅದರ ದುಷ್ಪರಿಣಾಮ ಏನು ಎಂಬುದು ಗೊತ್ತಿದೆ. ಕೇವಲ ಒಂದು ಸಮುದಾಯವನ್ನ ಗುರಿಯಾಗಿಟ್ಟುಕೊಂಡು ಕಾಯ್ದೆ ತರುತ್ತಿಲ್ಲ. ಈ ಬಗ್ಗೆ ಚರ್ಚೆಗೆ ಬರಲಿ, ಉತ್ತರ ನೀಡಲು ನಾವು ಸಿದ್ಧವಿದ್ದೇವೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದ ಮೊದಲ ಪೇಪರ್‌ಲೆಸ್‌ ಸರ್ಕಾರ ದುಬೈ