Webdunia - Bharat's app for daily news and videos

Install App

ಫೇಸ್‍ಬುಕ್‍ನಲ್ಲಿ ಪರಿಚಯವಾದ ಪ್ರೀತಿ, ಕೊಲೆನಲ್ಲಿ ಅಂತ್ಯ!

Webdunia
ಮಂಗಳವಾರ, 9 ಆಗಸ್ಟ್ 2022 (09:39 IST)
ಕಲಬುರಗಿ : ಫೇಸ್ಬುಕ್ ಮೂಲಕ ಪರಿಚಯವಾದ ಅಸ್ಸಾಂ ರಾಜ್ಯದ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದ ಬಿಹಾರ ಮೂಲದ ಯುವಕ ಮಹಿಳೆಯನ್ನು ಕೊಲೆ ಮಾಡಿದ ಘಟನೆಯನ್ನು ಚಿಂಚೋಳಿ ಠಾಣೆ ಪೊಲೀಸರು ಭೇದಿಸಿದ್ದಾರೆ.

ಮೃತ ಮಹಿಳೆಯನ್ನು ಜಸ್ಮೀನಾ ಎಂದು ಗುರುತಿಸಲಾಗಿದೆ. ಉತ್ತರ ಭಾರತದ ಅಸ್ಸಾಂ ರಾಜ್ಯದಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿದ್ದ ಜಸ್ಮೀನಾಗೆ ಫೇಸ್ ಬುಕ್ ಮೂಲಕ ಬಿಹಾರ ರಾಜ್ಯದ ಮೊಹಮ್ಮದ್ ಜುಲ್ಫಿಕರ್ ಎಂಬ ಯುವಕನ ಪರಿಚಯವಾಗಿದೆ.

ನಂತರ ಇಬ್ಬರು ಪರಸ್ಪರ ಪ್ರೀತಿಸ ತೊಡಗಿದ್ದರು. ಇಬ್ಬರು ಕೂಡಿ ಸಂಸಾರ ನಡೆಸಲು ನಿರ್ಧರಿಸಿ ಒಂದೂವರೆ ವರ್ಷದ ಹಿಂದೆ ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ಆಗಮಿಸಿ ಒಂದು ತಿಂಗಳು ಸಂಸಾರ ನಡೆಸಿದ್ದರು. ಅದಾದ ಬಳಿಕ ನನ್ನನ್ನ ಮದ್ವೆಯಾಗು ಅಂತಾ ಜಸ್ಮಿನಾ ಮಹ್ಮದ್ ಜುಲ್ಫಿಕರ್ಗೆ ಒತ್ತಾಯಿಸಿದ್ದಾಳೆ. ಆದರೆ ಆಕೆ ಎಷ್ಟೇ ಒತ್ತಾಯ ಮಾಡಿದರೂ ಜುಲ್ಫಿಕರ್ ಮದುವೆಯಾಗಲು ನಿರಾಕರಿಸುತ್ತಾ ಬಂದಿದ್ದನು.

ಕಳೆದ ವರ್ಷ ಏಪ್ರಿಲ್ 5 ರಂದು ಜಸ್ಮಿನಾಳನ್ನು ಪೋಲಕಪಳ್ಳಿ ಬಳಿ ಮಹ್ಮದ್ ಜುಲ್ಫಿಕರ್ ಕರೆದುಕೊಂಡು ಹೋಗಿದ್ದನು. ಈ ವೇಳೆ ಇಬ್ಬರ ನಡುವೆ ಅಲ್ಲಿಯೂ ಸಹ ಇಬ್ಬರ ಮಧ್ಯೆ ಜಗಳ ನಡೆದಿದೆ.

ಆರಂಭದಲ್ಲಿ ಜಸ್ಮಿನಾಳ ಮೃತದೇಹ ಯಾರದೆಂಬುದು ಪೊಲೀಸರಿಗೆ ತಿಳಿದಿರಲಿಲ್ಲ. ಹೀಗಾಗಿ ಪ್ರಕರಣ ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು. ಅಷ್ಟಕ್ಕೂ ಚಿಂಚೋಳಿ ಮತ್ತು ತೆಲಂಗಾಣದ ಗಡಿ ಪೊಲೀಸ್ ಠಾಣೆಗಳಲ್ಲಿ ಯಾವುದಾದರೂ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿದೆಯಾ ಎಂಬುದನ್ನು ಸಹ ಪೊಲೀಸರು ಪರಿಶೀಲನೆ ನಡೆಸಿದ್ದರು.

ಆದರೂ ಯಾವುದೇ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿರಲಿಲ್ಲ. ಹೀಗಾಗಿ ಪೊಲೀಸರು ಜಸ್ಮಿನಾಳ ಮೊಬೈಲ್ ನಂಬರ್ ಪಡೆದು ಕಾಲ್ ಡಿಟೈಲ್ ಸಂಗ್ರಹಿಸಿದರು. ಆಗ ಜಸ್ಮಿನಾ ಸಿಮ್ ಖರೀದಿ ಮಾಡಿದಾಗ ನೀಡಿದ ಫೋಟೊ ಸಂಗ್ರಹಿಸಿ ಮೃತದೇಹದ ಜೊತೆ ಹೋಲಿಕೆ ಮಾಡಿದಾಗ, ಮೃತದೇಹ ಜಸ್ಮಿನಾಳದ್ದೇ ಅಂತಾ ಪೊಲೀಸರಿಗೆ ತಿಳಿದುಬಂದಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಿವಿಕೆ ನೇತೃತ್ವದ ಮೈತ್ರಿಗೆ 'ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿಕೂಟ' ಹೆಸರು

ಮಳೆಯ ಕೊರತೆ: ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣ

SIR, ರಾಜ್ಯದಲ್ಲಿ 43.81ಲಕ್ಷ ಮತದಾರರಿಗೆ ಚುನಾವಣಾ ನೋಟಿಸ್‌

BRICSನ ಕಳೆದ ಮೂರು ಸಭೆಗಳಿಂದ ಫಲಿತಾಂಶ ಕಂಡಿಲ್ಲ: ಚಿದಂಬರಂ ಅಸಮಾಧಾನ

ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಕಾಲ್ನಡಿಗೆ ಯಶಸ್ವಿ: ವಿಜಯೇಂದ್ರ

ಮುಂದಿನ ಸುದ್ದಿ
Show comments