Daily Horoscope

Select Your Language

Notifications

webdunia
webdunia
webdunia
webdunia

ಜೈಲಿನಲ್ಲಿ ಪ್ರೇಮ, ಸಪ್ತಪದಿ ತುಳಿಯಲು ಸಜ್ಜಾದ ಕೈದಿಗಳು, ಏನಿದು ಘಟನೆ

Jaipur Tinder-suitcase murder case
ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಅಪರಾಧಿಗಳು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಘಟನೆ ರಾಜಸ್ಥಾನದ ಜೈಲಿನಲ್ಲಿ ನಡೆದಿದೆ. ಈ ಹಿನ್ನೆಲೆ ಅವರಿಗೆ ಇದೀಗ 15 ದಿನಗಳ ಪೆರೋಲ್ ನೀಡಲಾಗಿದೆ.

ದೇಶವನ್ನೇ ಬೆಚ್ಚಿಬೀಳಿಸಿದ 2023ರಲ್ಲಿ ಜೈಪುರ ಟಿಂಡರ್-ಸೂಟ್‌ಕೇಸ್ ಪ್ರಕರಣದಲ್ಲಿ ಪ್ರಿಯಾ ಸೇಠ್ ಬಂಧಿಯಾಗಿದ್ದಳು.

ಪ್ರಿಯಾ ಸೇಠ್ ಎಂಬಾಕೆ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವಕ ದುಶ್ಯಂತ್ ಶರ್ಮಾ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ನಂತರ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾಳೆ. ಸಂಗನೇರ್ ಓಪನ್ ಜೈಲಿನಲ್ಲಿ ಆಕೆ ಜೈಲುವಾಸ ಅನುಭವಿಸುತ್ತಿದ್ದಾಳೆ. ಆರು ತಿಂಗಳ ಹಿಂದೆ ಇದೇ ಜೈಲಿನಲ್ಲಿ ಪ್ರಸಾದ್ ಎಂಬಾತನ ಪರಿಚಯವಾಗಿ ಪರಸ್ಪರರು ಪ್ರೀತಿಸುತ್ತಿದ್ದಾರೆ.

ತನಗಿಂತ 10 ವರ್ಷ ದೊಡ್ಡವಳಾದ ತನ್ನ ಗೆಳತಿಯ ಪತಿ ಮತ್ತು ಮಕ್ಕಳನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಸಾದ್ ಶಿಕ್ಷೆ ಅನುಭವಿಸುತ್ತಿದ್ದಾನೆ. ಪ್ರಸಾದ್‌ನ ಗೆಳತಿ ಸಂತೋಷ್ ಅಲ್ವಾರ್‌ನಲ್ಲಿ ಟೇಕ್ವಾಂಡೋ ಆಟಗಾರ್ತಿಯಾಗಿದ್ದಳು. 2017ರ ಅಕ್ಟೋಬರ್ 2 ರಂದು ರಾತ್ರಿ ತನ್ನ ಪತಿ ಮತ್ತು ಮಕ್ಕಳನ್ನು ಕೊಲ್ಲಲು ತನ್ನ ಮನೆಗೆ ಕರೆದಿದ್ದಳು. ಸಹಚರನೊಂದಿಗೆ ಅಲ್ಲಿಗೆ ಆಗಮಿಸಿದ ಪ್ರಸಾದ್, ಪ್ರೇಯಸಿಯ ಪತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಜೈಲು ಸೇರಿದ್ದ. 

ರಾಜಸ್ಥಾನ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಜಿಲ್ಲಾ ಪೆರೋಲ್ ಸಲಹಾ ಸಮಿತಿಯು ಇಬ್ಬರೂ ಅಪರಾಧಿಗಳ ಪೆರೋಲ್ ಅರ್ಜಿಗಳನ್ನು ಅನುಮೋದಿಸಿದೆ ಎಂದು ಶುಕ್ರವಾರ ವರದಿ ಮಾಡಿದೆ. 

ಸೇಠ್ ಮತ್ತು ಪ್ರಸಾದ್ ಬುಧವಾರದಿಂದ 15 ದಿನಗಳ ಪೆರೋಲ್‌ಗಾಗಿ ಜೈಲಿನಿಂದ ಹೊರಬಂದರು ಎಂದು ತಿಳಿದುಬಂದಿದೆ.

ಸೇಠ್ ಮತ್ತು ಪ್ರಸಾದ್ ಅವರ ವಿವಾಹವು ವರನ ಹುಟ್ಟೂರು ಅಲ್ವಾರ್ ಜಿಲ್ಲೆಯ ಬರೋಡಮಿಯೊದಲ್ಲಿ ನಿಗದಿಯಾಗಿದೆ ಎಂದು ವರದಿಯಾಗಿದೆ.

ರಾಜಸ್ಥಾನದ ಸಂಗನೇರ್‌ನ ತೆರೆದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವಾಗ ಅವರು ಸುಮಾರು ಒಂದು ವರ್ಷದಿಂದ ಸಂಬಂಧದಲ್ಲಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ, ರಾಜೀವ್ ಗೌಡಗೆ ಬಿಗ್ ಶಾಕ್‌