Publish Date: Sun, 20 Feb 2022 (11:54 IST)
Updated Date: Sun, 20 Feb 2022 (11:57 IST)
ರಾಯಚೂರು : ಕ್ಯಾಷ್ ಬ್ಯಾಕ್ ಆಸೆಯಿಂದ ವಿದ್ಯಾರ್ಥಿ ₹3 ಲಕ್ಷ ಹಣ ಕಳೆದುಕೊಂಡ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದೆ.
ಶ್ರೀಧರ್ ಪಾಟೀಲ್, ವಂಚನೆಗೊಳಗಾದ ವಿದ್ಯಾರ್ಥಿ. ಮೊದಲಿಗೆ ₹200 ಕೊಟ್ಟು ವಸ್ತುವೊಂದನ್ನು ಖರೀದಿ ಮಾಡಿದ್ದ ವಿದ್ಯಾರ್ಥಿ ಶ್ರೀಧರ್ಗೆ 300 ರೂಪಾಯಿ ಕ್ಯಾಷ್ ಬ್ಯಾಕ್ ಬಂದಿತ್ತು. ಇದರಿಂದ ಖುಷಿಯಾದ ಶ್ರೀಧರ್ ಮತ್ತೆ ಸಾವಿರಾರು ಹಣ ಹಾಕಿ ವಸ್ತುಗಳನ್ನು ಖರೀದಿಸಿದ್ರು.
ಆಗಲೂ ಶ್ರೀಧರ್ ಪಾಟೀಲ್ಗೆ ಕ್ಯಾಷ್ ಬ್ಯಾಕ್ ಬಂದಿತ್ತು. ಬಳಿಕ ಸ್ನೇಹಿತರ ಬಳಿ ಸಾಲ ಮಾಡಿ ಪ್ರಾಡಕ್ಟ್ ಖರೀದಿಗೆ 3,78,600 ರೂ. ಹಾಕಿದ್ದಾರೆ. ಆಗ ಹಣ ನೀಡದೆ ಮತ್ತಷ್ಟು ಪ್ರಾಡಕ್ಟ್ ಖರೀದಿಸಲು ಸೂಚನೆ ಬಂದಿದೆ. ಕ್ಯಾಷ್ ಬ್ಯಾಕ್ ಆಸೆಯಿಂದ ₹3 ಲಕ್ಷ ಹಣ ಕಳೆದುಕೊಂಡಿದ್ದಾರೆ.